ಮುಂಬೈ, ಜು 24 (DaijiworldNews/PY): ಕೊರೊನಾದಿಂದ ಬಾಲಿವುಡ್ ಬಿಗ್ ಬಿ ಮುಕ್ತರಾಗಿದ್ದು, ಅವರ ಇತ್ತೀಚಿಗಿನ ಕೊರೊನಾ ವರದಿ ನೆಗೆಟಿವ್ ಬಂದಿದೆ ಎಂದು ಮಾಧ್ಯಮವೊಂದು ವರದಿ ಮಾಡಿದ್ದರ ಬಗ್ಗೆ ಬಿಗ್ ಬಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಇದು ನಕಲಿ ಹಾಗೂ ಸುಳ್ಳು ಸುದ್ದಿ. ನಾನು ಇನ್ನೂ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ.
ಅಮಿತಾಭ್ ಬಚ್ಚನ್ ಅವರಿಗೆ ಹೊಸದಾಗಿ ನಡೆಸಿರುವ ಕೊರೊನಾ ಪರೀಕ್ಷೆಯ ವರದಿಯಲ್ಲಿ ನೆಗೆಟಿವ್ ಬಂದಿದೆ ಎಂದು ಕೆಲವು ದಿನಗಳ ಹಿಂದೆ ಮಾಧ್ಯಮವೊಂದು ವರದಿ ಮಾಡಿತ್ತು. ಅಲ್ಲದೇ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿಯೂ ಕೂಡಾ ವೈರಲ್ ಆಗಿತ್ತು.
ಮಾಧ್ಯಮಗಳು ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುವುದು ಒಳ್ಳೆಯದಲ್ಲ. ಇದು ಮಾಧ್ಯಮಗಳಿಗೆ ಶೋಭೆಯಲ್ಲ ಎಂದು ಹೇಳಿದ್ದಾರೆ.