ಬೆಂಗಳೂರು, ಜು 22 (DaijiworldNews/PY): ಬಿಗ್ಬಾಸ್ ಸೀಸನ್ 3ರಲ್ಲಿ ಸ್ಪರ್ಧಿಯಾಗಿದ್ದ ಜಯಶ್ರೀ ರಾಮಯ್ಯ ಅವರು ಖಿನ್ನತೆಗೆ ಮತ್ತು ಈ ಜಗತ್ತಿಗೆ ಗುಡ್ಬೈ ಎಂದು ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದ ಪೋಸ್ಟ್ಗೆ ಆತಂಕ ಸೃಷ್ಟಿಯಾಗಿತ್ತು. ಈ ವಿಚಾರವಾಗಿ ಸ್ಪಷ್ಟನೆ ನೀಡಿರುವ ಅವರು, ಈಗ ನಾನು ಸೇಫ್ ಎಂದು ಹೇಳಿದ್ದಾರೆ.
ಜು 21ರ ಮಂಗಳವಾರದಂದು ಜಯಶ್ರೀ ಅವರು ಆಸ್ಪತ್ರಗೆ ದಾಖಲಾಗಿದ್ದರು. ಇದಕ್ಕೆ ಖಿನ್ನತೆ ಕಾರಣ ಎನ್ನಲಾಗಿದೆ. ಆಸ್ಪತ್ರೆಯಿಂದ ಬಿಡುಗರೆಯಾದ ಅವರು ಸಾಮಾಜಿ ಜಾಲತಾಣದಲ್ಲಿ ಈ ಕ್ವಿಟ್, ಖಿನ್ನಗೆ ಹಾಗೂ ಈ ಜಗತ್ತಿಗೆ ಗುಡ್ ಬೈ ಎಂದು ಪೋಸ್ಟ್ ಮಾಡಿದ್ದರು.
ಸಾಮಾಜಿ ಜಾಲತಾಣದಲ್ಲಿ ಜಯಶ್ರೀ ಅವರ ಪೋಸ್ಟ್ ನೋಡಿರುವ ಕೆಲವು ಮಂದಿ ಅವರಿಗೆ ಕರೆ ಮಾಡಿದ್ದಾರೆ. ಆದರೆ, ಜಯಶ್ರೀ ಅವರು ಯಾರ ಕರೆಯನ್ನು ಕೂಡಾ ಸ್ವೀಕರಿಸುತ್ತಿರಲಿಲ್ಲ. ಈ ಕಾರಣದಿಂದ ಎಲ್ಲರಲ್ಲೂ ಆತಂಕ ಸೃಷ್ಠಿಯಾಗಿತ್ತು. ಇದಾದ ನಂತರ ಜಯಶ್ರೀ ಅವರು ಸಾಮಾಜಿಕ ಜಾಲತಾಣದಲ್ಲಿ ಹೊಸ ಪೋಸ್ಟ್ವೊಂದನ್ನು ಹಾಕಿದ್ದು, ನಾನು ಸುರಕ್ಷಿತವಾಗಿದ್ದೇನೆ, ಲವ್ ಯೂ ಆಲ್ ಎಂದು ಪೋಸ್ಟ್ ಮಾಡಿದ್ದಾರೆ.
ಈ ವಿಚಾರವಾಗಿ ಜಯಶ್ರೀ ಅವರಿಗೆ ಹಲವಾರು ಮಂದಿ ಕಿವಿಮಾತು ಹೇಳಿದ್ದಾರೆ.
I'm Alright and safe!! Love you all❤️
Posted by Jayashree Ramaiah on Tuesday, 21 July 2020