'ಮೌನಮಾತಾದಾಗ' ಸೈಲೆಂಟ್ ಕಿರು ಚಿತ್ರ ಯೂಟ್ಯೂಬ್ನಲ್ಲಿ ಬಿಡುಗಡೆ
Mon, Jun 08 2020 04:16:59 PM
ಮಂಗಳೂರು, ಜೂ.08 (DaijiworldNews/MB) : ಯಶಸ್ ಕರಂ ಲಾಂಛನದಲ್ಲಿ ಪ್ರಜ್ವಲ್ ಕರ್ಪೆ ಅವರು ನಿರ್ದೇಶಿಸಿದ ಮೌನಮಾತಾದಾಗ ಸೈಲೆಂಟ್ ಕಿರು ಚಿತ್ರವು ಯುಟ್ಯೂಬ್ನಲ್ಲಿ ಇತ್ತೀಚೆಗೆ ಬಿಡುಗಡೆಯಾಗಿದೆ.
7,900 ಕ್ಕೂ ಅಧಿಕ ವೀಕ್ಷಕರನ್ನು ಪಡೆದಿರುವ ಈ ಸೈಲೆಂಟ್ ಕಿರು ಚಿತ್ರವು ಮಾನವೀಯತೆಗೆ ಒತ್ತುಕೊಟ್ಟು, ನೀನು ಏನು ನೆಡುತ್ತೀಯೋ ಅದೇ ಫಲ ನಿನಗೆ ಸಿಗುತ್ತದೆ ಎಂದು ಕರ್ಮ ಸಿದ್ಧಾಂತವನ್ನು ಸಾರುತ್ತದೆ.
ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ರಂಗನಟ, ಸಿನಿಮಾ ನಟ ಸುಬ್ರಹ್ಮಣ್ಯ ಪೈ ಬಿ.ಸಿ.ರೋಡು ಹಾಗೂ ಹಿರಿಯ ಸಾಹಿತಿ, ನಟ ಡಾ.ಕಾಸರಗೋಡು ಅಶೋಕ್ ಕುಮಾರ್ ನಟಿಸಿದ್ದಾರೆ. ಉಳಿದ ಪಾತ್ರಗಳಲ್ಲಿ ಪ್ರಜ್ವಲ್ ಕರ್ಪೆ, ಚಿರಾಗ್ ಮೊದಲಾದವರು ನಟಿಸಿದ್ದಾರೆ.
ಈ ಚಿತ್ರದಿಂದ ಯುವ ನಿರ್ದೇಶಕ ಪ್ರಜ್ವಲ್ ಕರ್ಪೆಯವರಿಗೆ ಕೋಸ್ಟಲ್ ವುಡ್, ಸ್ಯಾಂಡಲ್ ವುಡ್ನಲ್ಲಿ ಉತ್ತಮ ಅವಕಾಶ ಸಿಗುವುದು ಖಚಿತವಾಗಿದೆ ಎಂದು ವೀಕ್ಷಕರು ಹಾಗೂ ಸಿನಿಮಾ ವಿಮರ್ಶಕರು ಅಭಿಪ್ರಾಯ ಪಟ್ಟಿದ್ದಾರೆ.