ನವದೆಹಲಿ, ಮೇ 30 (Daijiworld News/MB) : ಲಾಕ್ಡೌನ್ ಕಾರಣದಿಂದಾಗಿ ತಮ್ಮ ಮನೆಗಳಿಗೆ ತೆರಳಲಾಗದೆ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುತ್ತಿರುವ ನಟ ಸೋನು ಸೂದ್ ಅವರ ಹೆಸರನ್ನು ವಲಸೆ ಕಾರ್ಮಿಕ ಮಹಿಳೆಯೊಬ್ಬರು ತಮ್ಮ ಮಗುವಿಗೆ ನಾಮಕರಣ ಮಾಡಿದ್ದಾರೆ.
ತನಗೆ ಸಹಾಯ ಮಾಡಿದ ಸೋನು ಸೂದ್ ಅವರಿಗೆ ಕೃತಜ್ಞತೆ ಸಲ್ಲಿಸುವ ನಿಟ್ಟಿನಲ್ಲಿ ಬಿಹಾರದ ಈ ಮಹಿಳೆ ಮಗುವಿಗೆ ಸೋನು ಸೂದ್ ಶ್ರೀವಾಸ್ತವ್ ಎಂದು ಹೆಸರಿಟ್ಟಿದ್ದು ನಟನಿಗೆ ಈ ಕುರಿತಾಗಿ ಮಹಿಳೆಯ ಕುಟುಂಬಸ್ಥರು ನಟನಿಗೆ ಕರೆ ಮಾಡಿ ತಿಳಿಸಿದ್ದಾರೆ. ಇದನ್ನು ತಿಳಿದ ನಟ ಸೋನು ಸೂದ್ ಭಾವುಕರಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೋನು ಸೂದ್, ನೀವು ಶ್ರೀವಾಸ್ತವ ಆಗಿರುವಾಗ ಮಗುವಿಗೆ ಸೂದ್ ಹೇಗೆ ಇಡುತ್ತೀರಿ. ಬದಲಾಗಿ ಸೋನು ಶ್ರೀವಾಸ್ತವ್ ಇಡಿ ಎಂದು ಹೇಳಿದೆ. ಆದರೆ ಆ ಮಹಿಳೆ ಇಲ್ಲ ನಾವು ಈಗಾಗಲೇ ಮಗುವಿಗೆ ಸೋನು ಸೂದ್ ಶ್ರೀವಾಸ್ತವ್ ಎಂದು ಹೆಸರು ಇಟ್ಟಿದ್ದೇವೆ ಎಂದು ಹೇಳಿದರು. ನನ್ನನ್ನು ಈ ಘಟನೆ ಭಾವುಕಗೊಳಿಸಿದೆ ಎಂದು ಹೇಳಿದ್ದಾರೆ.
ವಲಸೆ ಕಾರ್ಮಿಕರಿಗೆ ನಿರಂತರವಾಗಿ ಸಹಾಯ ಮಾಡುತ್ತಿರುವ ಸೋನು ಸೂದ್ ಅವರು, ಈವರಗೆ 2000 ಕ್ಕೂ ಅಧಿಕ ಕಾರ್ಮಿಕರನ್ನು ವಿವಿಧ ರಾಜ್ಯದಲ್ಲಿರುವ ತಮ್ಮ ಮನೆಗೆ ಕಳುಹಿಸಿದ್ದಾರೆ. ಮೇ 29, 2020 ರಂದು ಕೇರಳದಲ್ಲಿ ಸಿಲುಕಿದ್ದ 170 ಯುವತಿಯರನ್ನು ತಮ್ಮ ಮನೆಗಳಿಗೆ ವಿಮಾನದಲ್ಲಿ ಕಳಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.