ಬೆಂಗಳೂರು, ಮೇ 29 (DaijiworldNews/PY) : ಲಾಕ್ಡೌನ್ ಸಡಿಲಿಕೆ ಆದ ಬೆನ್ನಲ್ಲೇ ಧಾರವಾಹಿ ಚಿತ್ರೀಕರಣ ಪ್ರಾರಂಭ ಮಾಡಿವೆ. ಈಗ ಸಿನಿಮಾ ಹಾಗೂ ಧಾರವಾಹಿಗಳ ಚಿತ್ರೀಕರಣಕ್ಕೆ ಪ್ರೊಡುಸರ್ಸ್ ಗಿಲ್ಡ್ ಇಂಡಿಯಾವು ಹೊಸ ಮಾರ್ಗಸೂಚಿಯನ್ನು ಪ್ರಕಟ ಮಾಡಿದೆ.
ಶೂಟಿಂಗ್ ಸಂದರ್ಭ ಅನಗತ್ಯವಾಗಿ ಕಿಸ್ ಹಾಗೂ ಹಗ್ ಮಾಡಿಕೊಳ್ಳುವಂತಿಲ್ಲ. ಚಿತ್ರೀಕರಣದ ಸಂದರ್ಭ ತಂತ್ರಜ್ಞರು ಸೇರಿದಂತೆ ಎಲ್ಲಾ ಕಲಾವಿದರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಅಲ್ಲದೇಮ ಶೂಟಿಂಗ್ ಸೆಟ್ ಹಾಗೂ ಸ್ಟುಡಿಯೋದಲ್ಲಿ ಸಿಗರೇಟ್ ಹಂಚಿಕೊಳ್ಳುವಂತಿಲ್ಲ. 60 ವರ್ಷ ಮೀರಿದ ಕಾರ್ಮಿಕರು ಮತ್ತು ಕಲಾವಿದರು ಮುಂದಿನ ಮೂರು ತಿಂಗಳವರೆಗೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವಂತಿಲ್ಲ. ಚಿತ್ರೀಕರಣದ ಸಂದರ್ಭ ತಂತ್ರಜ್ಞರು ಮಾಸ್ಕ್ ಹಾಗೂ ಗ್ಲೌಸ್ ಧರಿಸಿ ಶೂಟಿಂಗ್ನಲ್ಲಿ ಭಾಗವಹಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ.
ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ಕೇಳುವ ನಿಟ್ಟಿನಲ್ಲಿ ಇಂದು ಚಲನಚಿತ್ರ ವಾಣಿಜ್ಯ ಮಂಡಳಿ ಸಭೆ ಸೇರಿ ಚರ್ಚೆ ನಡೆಸಿದೆ. ಈ ಬಗ್ಗೆ ನಾಳೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ತೀರ್ಮಾನ ಮಾಡಲಾಗಿದೆ. ಒಂದು ವೇಳೆ ಚಿತ್ರಮಂದಿರ ತೆರೆಯಲು ಅವಕಾಶ ಸಿಕ್ಕಿದರೆ ಕಡ್ಡಾಯವಾಘಿ ಎಸಿ ಬಳಸಬಾರದು, ಮೊದಲ ಆದ್ಯತೆಯನ್ನು ಸ್ವಚ್ಛತೆಗೆ ನೀಡಬೇಕು ಎಂದು ಬಿಬಿಎಂಪಿ ತಿಳಿಸಿದೆ.