ಕಾರ್ಕಳ, ಮೇ 28 (Daijiworld News/MB) : 'ಕಾಡು ಮನುಷ್ಯ' ಶೀರ್ಷಿಕೆಯಡಿಯಲ್ಲಿನ ದಿನಕರ್ ಜಿ ಮತ್ತು ತಂಡದ ಪ್ರಕೃತಿ ಸಂರಕ್ಷಣೆ ಕುರಿತ ಕಿರುಚಿತ್ರವನ್ನು ಮೇ 27 ರ ಬುಧವಾರ ಬಿಡುಗಡೆಯಾಗಿದೆ.
ಚಿತ್ರವನ್ನು ಬಿಡುಗಡೆ ಮಾಡಿ ಮಾತನಾಡಿದ ಕಾರ್ಕಳ ಶಾಸಕ ವಿ ಸುನೀಲ್ ಕುಮಾರ್ ಅವರು, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಈ ಕಾಡು ಮನುಷ್ಯ ಕಿರುಚಿತ್ರ ಪ್ರಕೃತಿಯನ್ನು ಸಂರಕ್ಷಿಸುವ ಅಗತ್ಯತೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತದೆ ಎಂದು ಹೇಳಿದರು.
ಇನ್ನು ಈ ಚಿತ್ರದಲ್ಲಿರುವ ಬೀಜ ಚೆಂಡುಗಳ ಪರಿಕಲ್ಪನೆಯ ಹೊಸ ವಿಧಾನವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಈ ಕಿರುಚಿತ್ರದ ರಚನೆ, ನಿರ್ದೇಶನವನ್ನು ದಿನಕರ್ ಜಿ. ಮಾಡಿದ್ದು ಜಯವರ್ಧನ್ ನಿರ್ಮಾಣ ಮಾಡಿದ್ದಾರೆ. ಶಂಕರ ನಾರಾಯಣ ಪೆರ್ಡೂರ್ ಸಂಕಲನ ಮಾಡಿದ್ದು ಸುನಾದ್ ಗೌತಮ್ ಸಂಗೀತದಲ್ಲಿ ಮೂಡಿಬಂದಿರುವ ಈ ಕಿರುಚಿತ್ರವನ್ನು ರಾಬಿನ್ ರೈ, ರಿಯಾಜ್ ಅಹಮದ್, ಶ್ರೀ ಬಂಗೇರ ಛಾಯಾಗ್ರಹಣ ಮಾಡಿದ್ದಾರೆ. ಶ್ರೀ ಬಂಗೇರ, ಅಬೂಬಕರ್, ಜೀವನ್ ಕೋಟಿಯಾನ್, ರಂಜಿತ್ ಕೋಟಿಯಾನ್ ಪಾತ್ರಕ್ಕೆ ಜೀವ ತುಂಬಿದ್ದಾರೆ.