ಬೆಂಗಳೂರು, ಮೇ 23 (Daijiworld News/MB) : ಕೊರೊನಾ ಲಾಕ್ಡೌನ್ನಿಂದಾಗಿ ಗಡ್ಡ ಬಿಟ್ಟಿರುವ ಅರ್ಜುನ್ ಜನ್ಯ ಅವರ ಪೋಟೋ ಒಂದನ್ನು ನಿರ್ದೇಶಕ ಪ್ರೇಮ್ ಅವರು ಟ್ವೀಟ್ ಮಾಡಿದ್ದು ಇವ್ರ್ಯಾರೋ ಹೊಸಾ ಸ್ವಾಮೀಜಿ ಅಂತ ಕನ್ಫ್ಯೂಸ್ ಆಗ್ಬೇಡಿ, ನಮ್ಮ ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯನೇ ಎಂದು ಹೇಳಿದ್ದಾರೆ.
ಇವ್ರ್ಯಾರೋ ಹೊಸಾ ಸ್ವಾಮೀಜಿ ಅಂತ ಕನ್ಫ್ಯೂಸ್ ಆಗಬೇಡಿ. ನಮ್ಮ ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯನೇ. ಅಪ್ಡೇಟ್ ಸಾಂಗ್ಗಳನ್ನು ಕೊಡೋದರ ಜೊತೆಗೆ ಅವ್ರ ಗೆಟಪ್ ಕೂಡ ಅಪ್ಡೇಟ್ ಮಾಡ್ಕೊಂಡಿದಾರೆ ಎಂದು ಪ್ರೇಮ್ ಹೇಳಿದ್ದಾರೆ.
ಇತ್ತೀಚೆಗೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅರ್ಜುನ್ ಜನ್ಯ ವೈದ್ಯರ ಸಲಹೆಯಂತೆ ವಿಶ್ರಾಂತಿ ಪಡೆದಿದ್ದು ಈಗ "ಏಕ್ ಲವ್ ಯಾ" ಸಿನಿಮಾಕ್ಕೆ ಹಾಡುಗಳನ್ನು ಸಿದ್ಧ ಮಾಡುವುದರಲ್ಲಿ ಬಿಝಿಯಾಗಿದ್ದಾರೆ. . ಈ ವೇಳೆ ಅವರು ತಮ್ಮ ಗೆಟಪ್ ಅನ್ನು ಚೆಂಚ್ ಮಾಡಿಕೊಂಡಿದ್ದು, ಕೆಂಪು ಪಂಚೆ, ಜೊತೆಗೆ ಕೆಂಪು ಪೇಟ ಹಾಕಿಕೊಂಡು ಬಿಳಿ ಬಣ್ಣದ ಶರ್ಟ್ ತೊಟ್ಟು ಸ್ವಾಮೀಜಿಯ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಕೊರೊನಾ ಲಾಕ್ಡೌನ್ ಬಳಿಕ ಚಿತ್ರರಂಗದ ಎಲ್ಲಾ ಕೆಲಸಗಳು ಸ್ಥಗಿತಗೊಂಡಿದ್ದು ಇತ್ತೀಚೆಗೆ ಸಿನಿಮಾದ ಚಿತ್ರೀಕರಣ ಬಿಟ್ಟು ಉಳಿದ ಕೆಲಸಗಳನ್ನು ಮಾಡಲು ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು ಇದೀಗ ಕನ್ನಡ ಚಿತ್ರರಂಗದ ಹಲವು ಸಿನಿಮಾಗಳು ಹಾಡು ಮೊದಲಾದ ತಾಂತ್ರಿಕ ಕಾರ್ಯಗಳನ್ನು ಆರಂಭ ಮಾಡಿದೆ.