ಮುಂಬೈ, ಮೇ 19 (Daijiworld News/MB) : ಬಾಲಿವುಡ್ ನಟ ನವಾಝುದ್ದೀನ್ ಸಿದ್ಧಿಕಿ ಅವರ ಪತ್ನಿ ಆಲಿಯಾ ಸಿದ್ದಿಕಿ ವಿಚ್ಚೇಧನಕ್ಕೆ ಕೋರಿ ಇಮೇಲ್ ಮತ್ತು ವಾಟ್ಸಾಪ್ ಮೂಲಕ ಡಿವೋರ್ಸ್ ನೋಟಿಸ್ ಕಳುಹಿಸಿದ್ದಾರೆ.
ಈ ಕುರಿತಾಗಿ ಪತ್ರಕರ್ತ ಮತ್ತು ಚಲನಚಿತ್ರ ವಿಮರ್ಶಕ ಅನಂತ್ ವಿಜಯ್ ಟ್ವೀಟ್ ಮಾಡಿದ್ದಾರೆ.
ನವಾಝುದ್ದೀನ್ ಸಿದ್ಧಿಕಿ ಮೇಲೆ ಗಂಭೀರವಾದ ಆರೋಪ ಮಾಡಿರುವ ಸಿದ್ಧಿಕಿ ಪತ್ನಿ ಆಲಿಯಾ ಕೊರೊನಾ ವೈರಸ್ ಲಾಕ್ಡೌನ್ ಇರುವ ಕಾರಣದಿಂದಾಗಿ ಸ್ಪೀಡ್ ಪೋಸ್ಟ್ ಮೂಲಕವೂ ನೋಟಿಸ್ ಕಳುಹಿಸಲಾಗದ ಕಾರಣ ಇ-ಮೇಲ್ ಹಾಗೂ ವಾಟ್ಸ್ಆಪ್ ಮೂಲಕ ನೋಟಿಸ್ ಕಳುಹಿಸಿದ್ದಾರೆ ಎಂದು ಆಲಿಯಾ ಪರ ವಕೀಲ ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.
ಈ ನೊಟೀಸ್ನ್ನು ಮೇ 7 ರಂದು ಕಳುಹಿಸಲಾಗಿದ್ದರೂ ಕೂಡಾ ಈವರೆಗೆ ನವಾಝುದ್ದೀನ್ ಯಾವ ಪ್ರತಿಕ್ರಿಯೆಯನ್ನೂ ನೀಡಿಲ್ಲ. ವಿಚ್ಛೇಧನದೊಂದಿಗೆ ಪರಿಹಾರವನ್ನೂ ಕೋರಲಾಗಿದೆ.
ವಿಚ್ಛೇಧನಕ್ಕೆ ನೀಡಿರುವ ಕಾರಣ ಮತ್ತು ವಿಷಯಗಳ ಬಗ್ಗೆ ನಾನು ವಿವರವಾಗಿ ತಿಳಿಸಲು ಇಚ್ಛಿಸುವುದಿಲ್ಲ. ಆದರೆ ಆರೋಪ ಭಾರೀ ಗಂಭೀರವಾದದ್ದು ಎಂದು ವಕೀಲರು ತಿಳಿಸಿದ್ದಾರೆ.
10 ವರ್ಷಗಳ ಹಿಂದೆ ಆಲಿಯಾ ಹಾಗೂ ನವಾಝುದ್ಧೀನ್ ವಿವಾಹವಾಗಿದ್ದು ಇವರಿಗೆ ಇಬ್ಬರು ಮಕ್ಕಳಿದ್ದಾರೆ.