ಮುಂಬೈ, ಮೇ 16 (DaijiworldNews/PY) : ನೆನಪುಗಳನ್ನು ಮತ್ತೆ ಮತ್ತೆ ನೆನಪು ಮಾಡುಕೊಳ್ಳುವುದೇ ಒಂದು ರೀತಿಯಾದ ಖುಷಿಯ ಸಂಗತಿ. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಮ್ಮ 20 ವರ್ಷದ ಹಿಂದಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ಧಾರೆ.
2000 ಇಸವಿಯ ಜನವರಿ 1ರಂದು ಬಾಲಿವುಡ್ ನಟ ಆಮೀರ್ ಖಾನ್, ಪ್ರಕಾಶ್ ಪಡುಕೋಣೆ ದೀಪಿಕಾ ಪಡುಕೋಣೆ ಅವರ ತಂದೆಯ ಮನೆಗೆ ಆಗಮಿಸಿದ್ದರು. ಆ ಸಂದರ್ಭ ಅಮೀರ್ ಖಾನ್ ಅವರು ಪ್ರಕಾಶ್ ಅವರ ಮನೆಯಲ್ಲಿ ಮೊಸರನ್ನ ಮಾಡಿದ್ದರು. ಈ ಫೋಟೋದಲ್ಲಿ ದೀಪಿಕಾ ಅಮೀರ್ ಖಾನ್ ಅವರ ಪಕ್ಕದಲ್ಲಿ ಕುಳಿತ್ತಿದ್ದಾರೆ. ಫೋಟೋದಲ್ಲಿ ದೀಪಿಕಾ ತಾಯ ಉಜ್ವಲ ಪಡುಕೋಣೆ, ತಂಗಿ ಅನಿಷಾ ಪಡುಕೋಣೆ, ಪ್ರಕಾಶ ಪಡುಕೋಣೆ ಗ್ರೂಪ್ ಫೋಟೋಕ್ಕೆ ಪೋಸ್ ನೀಡಿದ್ದಾರೆ.
ಈ ಬಗ್ಗೆ ಹೇಳಿರುವ ದೀಪಿಕಾ ಪಡುಕೋಣೆ. ಈ ಫೋಟೋ ತೆಗೆಯುವ ಸಂದರ್ಭ ನನಗೆ ಕೇವಲ 13 ವರ್ಷ ವಯಸ್ಸು. ಆ ವೇಳೆ ನನಗೆ ತುಂಬಾ ಹೊಟ್ಟೆ ಹಸಿವಾಗಿತ್ತು ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋಕ್ಕೆ ಹಲವಾರು ಕಮೆಂಟ್ಗಳು ಬಂದಿದ್ದು, ಒಮ್ಮೆಯಾದರೂ ತೆರೆಮೇಲೆ ಒಟ್ಟಿಗೆ ಕಾಣಿಸಿಕೊಳ್ಳಿ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದು, ಸಿನಿಮಾದಲ್ಲಿ ನಿಮ್ಮಿಬ್ಬರನ್ನು ನೋಡಬೇಕು ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.