ಬೆಂಗಳೂರು, ಮೇ 13 (Daijiworld News/MB) : ಜನಮೆಚ್ಚುಗೆಗೆ ಪಾತ್ರವಾದ ದಿಯಾ ಸಿನಿಮಾದ ನಿರ್ದೇಶಕ ಕೆ ಎಸ್ ಅಶೋಕ್ ತನ್ನ ನಿರ್ದೇಶನದ ಸಿನಿಮಾದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದು ದಿಯಾ ಸಿನಿಮಾದಿಂದಾಗಿ ಚಿತ್ರೋದ್ಯಮದಲ್ಲಿ ನನಗೆ ಒಂದು ಸ್ಥಾನ ದೊರೆತಿದೆ ಎಂದು ಹೇಳಿದ್ದಾರೆ.
ತನ್ನ ಮುಂದಿನ ಸಿನಿಮಾದ ಬಗ್ಗೆ ಮಾಹಿತಿ ನೀಡುತ್ತಾ ಮಾತನಾಡಿದ ಅವರು, ಇಂದು ಕೆಎಸ್ ಅಶೋಕ್ ಎನ್ನುವ ನಿರ್ದೇಶಕನೊಬ್ಬನಿದ್ದಾನೆ ಎಂದು ಎಲ್ಲರೂ ಮಾತನಾಡಿಕೊಳ್ಳುವಂತೆ ಮಾಡಿದ ಸಿನಿಮಾ ದಿಯಾ. ಬಹಳಷ್ಟು ಜನರು ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟು ಮಾತ್ರ ರಿಮೇಕ್ ಹಕ್ಕುಗಳಿಗಾಗಿಯೂ ನಿರ್ಮಾಪಕರೊಂದಿಗೆ ಮಾತುಕತೆ ನಡೆಯುತ್ತಿದೆ. ನಾನು ಹೊಸದೊಂದು ಸಿನಿಮಾದ ನಿರ್ದೇಶನ ಮಾಡಲು ಕೂಡಾ ಮುಂದಾಗಿದ್ದೇನೆ ಎಂದು ಹೇಳಿದ್ದಾರೆ.
ಮುಂದಿನ ಸಿನಿಮಾ ಸೈಕೋ ಥ್ರಿಲ್ಲರ್ ಆಗಿರಲಿದೆ. ನಾನು ವೈಯಕ್ತಿಕವಾಗಿ ಸೀರಿಯಲ್ ಕಿಲ್ಲರ್ ಕಥೆಗಳ ದೊಡ್ಡ ಅಭಿಮಾನಿ. ಇದು ಚಲನಚಿತ್ರ ನಿರ್ಮಾಪಕರು ಹೆಚ್ಚು ಬಳಸದ ಒಂದು ಪ್ರಕಾರವಾಗಿದೆ.ನನ್ನ ಎಂದಿಗೂ ಮರೆಯದ ಚಿತ್ರ ಕೊರಿಯನ್ ಚಲನಚಿತ್ರ, ಮೆಮೊರೀಸ್ ಆಫ್ ಮರ್ಡರ್-ಪ್ಯಾರಾಸೈಟ್ ನಿರ್ದೇಶಕ ಬಾಂಗ್ ಜೂಹ್-ಹೋ ಅವರ ಕ್ರೈಂ ಥ್ರಿಲ್ಲರ್ ಡ್ರಾಮಾ ಆಗಿದೆ. ಅಂತಹ ಚಲನಚಿತ್ರಗಳಿಗೆ ಸಾಕಷ್ಟು ಹೋಮ್ ವರ್ಕ್ ಬೇಕು, ಇದಕ್ಕಾಗಿ ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ, ನಟ ಪೃಥ್ವಿ ಅಂಬರ್, ಸಂಗೀತ ನಿರ್ದೇಶಕ, ಅಜನೀಶ್ ಲೋಕನಾಥ್ ಮತ್ತು ನಾನು ಪುನೀತ್ ರಾಜ್ಕುಮಾರ್ ಅವರಿಂದ ಕರೆ ಸ್ವೀಕರಿಸಿದ್ದೆವು. ಅವರು ನಮ್ಮ ಬಗ್ಗೆ ಒಂದಷ್ಟು ಕೆಲ ಒಳ್ಳೆ ಮಾತುಗಳನ್ನು ಹೇಳಿದ್ದರು. ನನ್ನ ಕೆಲಸ ಮತ್ತು ಚಲನಚಿತ್ರದ ಬಗ್ಗೆ ಅವರು ಮೆಚ್ಚುಗೆ ಮಾತನ್ನು ಹೇಳಿದಾಗ ನನಗೆ ಸಂತಸವಾಗಿತ್ತು ಎಂದು ಹೇಳಿದ್ದಾರೆ.