ಮುಂಬೈ, ಮೇ 11 (Daijiworld News/MB) : ಲಾಕ್ಡೌನ್ ನಿಯಮ ಉಲ್ಲಂಘನೆ ಮಾಡಿದ ಆರೋಪದಲ್ಲಿ ನಟಿ ಹಾಗೂ ಮಾಡೆಲ್ ಪೂನಂ ಪಾಂಡೆ ವಿರುದ್ಧ ಮುಂಬೈ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಪೂನಂ ಪಾಂಡೆ ಹಾಗೂ ಆತನ ಸ್ನೇಹಿತ ಸ್ಯಾಮ್ ಅಹ್ಮದ್ ಇಬ್ಬರು ಲಾಕ್ಡೌನ್ ನಿಯಮ ಮುರಿದು ಕಾರಿನಲ್ಲಿ ಸುತ್ತಾಡುತ್ತಿದ್ದು ಮುಂಬೈ ಪೊಲೀಸರು ಅವರನ್ನು ಬಂಧಿಸಿ ಬಳಿಕ ಬಿಡುಗಡೆ ಮಾಡಿದ್ದು ಲಾಕ್ ಡೌನ್ ನಿಯಮದಡಿಯಲ್ಲಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಇವರಿಬ್ಬರ ವಿರುದ್ಧ ಸೆಕ್ಷನ್ 269 (ಜೀವಕ್ಕೆ ಅಪಾಯ ತರುವ ರೋಗದ ಸೋಂಕನ್ನು ಹರಡುವ ನಿರ್ಲಕ್ಷ್ಯದ ಕ್ರಿಯೆ) ಮತ್ತು 188 (ಅಸಹಕಾರ) ಭಾರತೀಯ ದಂಡ ಸಂಹಿತೆಯ (ಐಪಿಸಿ) ಮತ್ತು ರಾಷ್ಟ್ರೀಯ ವಿಪತ್ತು ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ಮೃತ್ಯುಂಜಯ್ ಹಿರೇಮಠ್ ತಿಳಿಸಿದ್ದಾರೆ.
ತನ್ನ ವಿವಾದಾದ್ಮಕ ಹೇಳಿಕೆಯಿಂದಲ್ಲೇ ಹೆಚ್ಚಾಗಿ ಸುದ್ದಿಯಾಗಿರುವ ಪೂನಂ ಪಾಂಡೆ 2011ರಲ್ಲಿ ಟೀಂ ಇಂಡಿಯಾ ಒನ್ ಡೇ ಕ್ರಿಕೆಟ್ ವಿಶ್ವಕಪ್ ಗೆದ್ದರೆ ನಗ್ನವಾಗಿ ನಿಲ್ಲುತ್ತೇನೆ ಎಂದು ಹೇಳಿ ಭಾರೀ ಸುದ್ದಿಯಾಗಿದ್ದರು.