ಬೆಂಗಳೂರು, ಮೇ 09 (Daijiworld News/MB) : ರಾಕಿ ಬಾಯ್ ಯಶ್ ಅಭಿನಯದ ಬಿಗ್ ಬಜೆಟ್ ಸಿನಿಮಾ ಕೆಜಿಎಫ್ನ ಯಶಸ್ಸಿನ ಬಳಿಕ ಚಾಪ್ಟರ್ 2 ಸಹ ಬಿಡುಗಡೆಗಾಗಿ ಕಾಯುತ್ತಿದೆ. ಏತನ್ಮಧ್ಯೆ ತೆಲುಗು ಟಿವಿ ಚಾನಲ್ ಕೆಜಿಎಫ್ ಚಿತ್ರವನ್ನು ಅಕ್ರಮವಾಗಿ ಪ್ರಸಾರ ಮಾಡಿದ್ದು ಈ ಚಾನಲ್ ವಿರುದ್ಧ ಕಾನೂನು ಹೋರಾಟಕ್ಕೆ ಚಿತ್ರತಂಡ ಮುಂದಾಗಿದೆ.
ಕೆಜಿಎಫ್ ಚಾಪ್ಟರ್ 1 ರ ತೆಲುಗು ಅವತರಣಿಕೆಯನ್ನು ತೆಲುಗು ವಾಹಿನಿ ಎವರಿ (Every) ಎಂಬ ಸ್ಥಳೀಯ ಚಾನಲ್ ಒಂದರಲ್ಲಿ ಅಕ್ರಮವಾಗಿ ಪ್ರಸಾರ ಮಾಡಲಾಗಿದ್ದು ಇದೀಗ ಚಾನಲ್ ವಿರುದ್ಧ ಕಾನೂನು ಹೋರಾಟಕ್ಕೆ ತಂಡ ಮುಂದಾಗಿದ್ದು ಈ ಬಗ್ಗೆ ಚಿತ್ರ ವಿತರಕ ಕಾರ್ತಿಕ್ ಗೌಡ ಟ್ವೀಟ್ ಮಾಡಿದ್ದಾರೆ.
Every ಎಂಬ ಹೆಸರಿನ ತೆಲುಗು ಸ್ಥಳೀಯ ಚಾನೆಲ್ ಕೆಜಿಎಫ್ ಸಿನಿಮಾವನ್ನು ಅಕ್ರಮವಾಗಿ ಪ್ರಸಾರ ಮಾಡಿದೆ. ನಾವು ಈ ಬಗ್ಗೆ ನ್ಯಾಯಾಂಗ ಹೋರಾಟ ನಡೆಸುತ್ತೇವೆ. ಕೆಜಿಎಫ್ ಸಿನಿಮಾದ ಸ್ಯಾಟಲೈಟ್ ಹಕ್ಕುಗಳ ಮಾತುಕತೆ ನಡೆಯುತ್ತಿದ್ದು ಇನ್ನೇನು ಅಂತಿಮ ಹಂತದಲ್ಲಿದೆ ಎನ್ನುವಾಗ ಚಾನಲ್ ಈ ಕೃತ್ಯ ಎಸಗಿದೆ. ನಮ್ಮಲ್ಲಿ ಈ ಬಗ್ಗೆ ಸ್ಕ್ರೀನ್ ಶಾಟ್, ವಿಡಿಯೋ ಸಾಕ್ಷಿಗಳಿದೆ ಎಂದು ಹೇಳಿದ್ದಾರೆ.