ವಾಷಿಂಗ್ಟನ್, ಮೇ 07 (Daijiworld News/MB) : ವಯಸ್ಸು 57 ಆದರೂ ಇನ್ನೂ ಹುಡುಗನಂತೆ ಕಾಣುವ ಹಾಲಿವುಡ್ ನಟ ಟಾಲ್ ಕ್ರೂಸ್ಗೆ ಬಾಹ್ಯಾಕಾಶದಲ್ಲಿ ಸಾಹಸ ಸನ್ನಿವೇಶ ಚಿತ್ರೀಕರಣಕ್ಕೆ ನಾಸಾ ಅವಕಾಶ ನೀಡಿದೆ.
ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ಈ ಚಿತ್ರೀಕರಣಕ್ಕೆ ಒಪ್ಪಿಗೆ ಸೂಚಿಸಿದ್ದು ಈ ಬಗ್ಗೆ ನಾಸಾದ ಆಡಳಿತ ಮುಖ್ಯಸ್ಥರಾದ ಜಿಮ್ ಟ್ವಿಟ್ ಮಾಡಿದ್ದು, "ಟಾಮ್ ಕ್ರೂಸ್ನೊಂದಿಗೆ ಬಾಹ್ಯಾಕಾಶದಲ್ಲಿ ಸಿನಿಮಾದ ಚಿತ್ರೀಕರಣದೊಂದಿಗೆ ಕಾರ್ಯ ನಿರ್ವಹಿಸಲು ನಾಸಾ ಉತ್ಸುಕವಾಗಿದೆ. ಮಹತ್ವಾಕಾಂಕ್ಷೆಯ ಯೋಜನೆಗಾಗಿ ಹೊಸ ತಲೆಮಾರಿನ ಎಂಜಿನಿಯರ್ಗಳು ಮತ್ತು ವಿಜ್ಞಾನಿಗಳನ್ನು ಪ್ರೇರೇಪಿಸಲು ನಮಗೆ ಜನಪ್ರಿಯ ಮಾಧ್ಯಮಗಳು ಬೇಕಾಗುತ್ತವೆ" ಎಂದು ಹೇಳಿದ್ದಾರೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಚಿತ್ರತಂಡ, ಇದು ಮಿಷನ್ ಇಂಪಾಸಿಬಲ್ ಸಿನಿಮಾದಂತಲ್ಲ. ಯಾವುದೇ ಸ್ಟುಡಿಯೋ ಕಾರ್ಯ ಇದರಲಿಲ್ಲ. ಮೊದಲು ನಿರೂಪಣೆ ಮೂಲಕ ಬಾಹ್ಯಾಕಾಶವನ್ನು ಪರಿಚಯ ಮಾಡಲಾಗುತ್ತದೆ. ಬಳಿಕ ಇನ್ನಿತರ ಚಿತ್ರೀಕರಣ ಮಾಡಿದ ಸನ್ನಿವೇಶಗಳನ್ನು ತೋರಿಸಲಾಗುತ್ತದೆ ಎಂದು ಹೇಳಿದೆ.
ಮಿಷನ್ ಇಂಪಾಸಿಬಲ್ ಸಿನಿಮಾದಲ್ಲಿ ಪ್ರಖ್ಯಾತರಾಗಿರುವ ಟಾಮ್ ಕ್ರೂಸ್ ಈ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಚೇತರಿಕೆಗೊಂಡ ಅವರು ಬುರ್ಜ್ ಖಲೀಫಾ ಕಟ್ಟಡವನ್ನೇ ಏರಿದ್ದರು.