ಚೆನ್ನೈ, ಮೇ 06 (Daijiworld News/MB) : ಕೊರೊನಾ ವಿರುದ್ಧದ ಹೋರಾಟಕ್ಕಾಗಿ 200 ರೂ. ದೇಣಿಗೆ ನೀಡಿ ನನ್ನೊಂದಿಗೆ ಡ್ಯಾನ್ಸ್ ಮಾಡುವ ಅವಕಾಶ ಪಡೆಯಿರಿ ಎಂದು ಬಹು ಭಾಷಾ ನಟಿ ಶ್ರೀಯಾ ಶರಣ್ ಅವರು ಹೇಳಿದ್ದಾರೆ.
ಕೊರೊನಾ ವಿರುದ್ಧದ ಹೋರಾಟಕ್ಕಾಗಿ ಹಲವು ನಟ ನಟಿಯರು ಸಹಾಯ ಮಾಡುತ್ತಿದ್ದಾರೆ. ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ನಟಿಸಿದ ಶ್ರೀಯಾ ಕೂಡಾ ಸಹಾಯ ಮಾಡುತ್ತಿದ್ದು ಈ ಕುರಿತಾಗಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಲೈವ್ನಲ್ಲಿ ನಾನು ಹೇಳಿದ ಸಂಸ್ಥೆಗೆ 200 ರೂ. ದೇಣಿಗೆ ನೀಡಿ ನನ್ನ ಜೊತೆ ಡ್ಯಾನ್ಸ್ ಮತ್ತು ಯೋಗ ಮಾಡುವ ಅವಕಾಶ ಪಡೆಯಿರಿ ಎಂದು ಹೇಳಿದ್ದಾರೆ.
ತನ್ನ ಡ್ಯಾನ್ಸ್ನ್ನು ಕೂಡಾ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಅವರು ಕೊರೊನಾ ವಿರುದ್ಧದ ಹೋರಾಟಕ್ಕೆ ಚೆನ್ನೈನ ಒಂದು ಸಂಸ್ಥೆಯೊಂದಿಗೆ ನಾನು ಸೇರಿಕೊಂಡಿದ್ದೇನೆ. ಈ ಸಂಸ್ಥೆ ಮೂಲಕ ಕೂಲಿ ಕಾರ್ಮಿಕರಿಗೆ, ಅನಾಥರಿಗೆ ಮತ್ತು ಅಂಗವಿಕಲರಿಗೆ ಸಹಾಯ ಮಾಡುತ್ತಿದ್ದೇವೆ. ನೀವು ಕೂಡಾ ಈ ಸಂಸ್ಥೆಗೆ 200 ರೂ. ದೇಣಿಗೆ ನೀಡಿ, ನನ್ನೊಂದಿಗೆ ಡ್ಯಾನ್ಸ್ ಮತ್ತು ಯೋಗ ಮಾಡುವ ಅವಕಾಶ ಪಡೆಯಿರಿ. ಶನಿವಾರದವರೆಗೂ ಈ ಸ್ಪರ್ಧೆ ಇರುತ್ತದೆ, ಭಾನುವಾರ ವಿನ್ನರ್ ಯಾರು ಎಂದು ಘೋಷಣೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಶ್ರೀಯಾ ಶರಣ್ 2018ರ ಮಾರ್ಚ್ ತಿಂಗಳಲ್ಲಿ ವಿದೇಶಿಗರಾದ ಆಂಡ್ರೆ ಕೋಶಿವ್ನನ್ನು ಮದುವೆಯಾಗಿದ್ದು ಇಬ್ಬರೂ ಸ್ಪೇನ್ನಲ್ಲೇ ನೆಲೆಸಿದ್ದಾರೆ. ಇತ್ತೀಚೆಗೆ ತನ್ನ ಪತಿಗೆ ಕೊರೊನಾ ಲಕ್ಷಣಗಳು ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ವೈದ್ಯರು ಮನೆಯಲ್ಲೇ ಕ್ವಾರಂಟೈನ್ನಲ್ಲಿ ಇರುವಂತೆ ಹೇಳಿದ್ದರು ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.