ಮುಂಬೈ, ಮೇ 03 (Daijiworld News/MB) : ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಮನೆಯಲ್ಲೇ ಇರುವ ನಟಿ ದೀಪಿಕಾ ಪಡುಕೋಣೆ ಮನೆಯಲ್ಲಿ ಮಾಡಿದ ಅಡುಗೆಗಳ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದು ಫೋಟೋವೊಂದನ್ನು ನೋಡಿ ನೆಟ್ಟಿಗರು ದೀಪಿಕಾ ಗರ್ಭಿಣಿಯೇ ಎಂದು ಕೇಳಲು ಆರಂಭಿಸಿದ್ದಾರೆ.
ನಟಿ ದೀಪಿಕಾ ಪಡುಕೋಣೆ ತಮ್ಮ ಇನ್ಸ್ಟಾಗ್ರಾಂನಲ್ಲಿ ಉಪ್ಪು ಖಾರ ಹಾಕಿದ ಮಾವಿನಕಾಯಿ ಫೋಟೋವನ್ನು ಪೋಸ್ಟ್ ಮಾಡಿದ್ದು ನಾನು ಈವರೆಗೆ ಭೇಟಿಯಾದ ಎಲ್ಲರಿಗಿಂತ ನೀವು ಉತ್ತಮ ಎಂದು ಬರೆದಿದ್ದಾರೆ.
ನೆಟ್ಟಿಗರು ಈ ಫೋಸ್ಟ್ ನೋಡಿ ನೀವು ಗರ್ಭಿಣಿಯೇ ಎಂದು ಪ್ರಶ್ನೆ ಮಾಡಿದ್ದು ಕೆಲವರು ರಣವೀರ್ ಸಿಂಗ್ಗಿಂತ ಇಷ್ಟವೇ ಎಂದು ಕೇಳಿದ್ದಾರೆ.
ಲಾಕ್ಡೌನ್ ಬಳಿಕ ಮನೆಯಲ್ಲಿಯೇ ಇರುವ ಹಲವು ಸೆಲೆಬ್ರೆಟಿಗಳು ಮನೆಯಲ್ಲಿ ಮಾಡಿದ ಅಡುಗೆ, ವರ್ಕೌಟ್ ಹಾಗೂ ತಾವು ಕೊರೊನಾ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಿದ ವಿಡಿಯೋ, ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.