ನವದೆಹಲಿ, ಎ.28 (Daijiworld News/MB) : ಇಂಗ್ಲೆಂಡ್ಗೆ ಪ್ರಯಾಣ ಮಾಡಿ ಬಂದ ಬಳಿಕ ಕ್ವಾರಂಟೈನ್ಗೆ ಒಳಗಾಗದೆ ವಿವಿಧ ಸಮಾರಂಭಗಳಲ್ಲಿ ಭಾಗವಹಿಸದ ಬಳಿಕ ಕೊರೊನಾ ಸೋಂಕು ದೃಢಪಟ್ಟ ಗಾಯಕಿ ಕನಿಕಾ ಕಪೂರ್ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೆ ಈಗ ಗುಣಮುಖರಾಗಿರುವ ಅವರು ತನ್ನ ಪ್ಲಾಸ್ಮಾವನ್ನು ದಾನ ಮಾಡಿ ಕೊರೊನಾ ಸೋಂಕಿತರ ಜೀವ ಉಳಿಸಲು ಮುಂದಾಗಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ಈಗಾಗಲೇ ಮೂವರು ಕೊರೊನಾದಿಂದ ಗುಣಮುಖರಾದವರು ತಮ್ಮ ಪ್ಲಾಸ್ಮಾವನ್ನು ದಾನ ಮಾಡಿದ್ದಾರೆ. ನಾನು ಕೂಡಾ ಪ್ಲಾಸ್ಮಾ ನೀಡಲು ನಿರ್ಧಾರ ಮಾಡಿದ್ಧೇನೆ. ಆ ನಿಟ್ಟಿನಲ್ಲಿ ಈಗಾಗಲೇ ರಕ್ತ ಪರೀಕ್ಷೆ ಮಾಡಲಾಗಿದೆ. ಪರೀಕ್ಷಾ ವರದಿಯಲ್ಲಿ ಯಾವುದೇ ತೊಂದರೆ ಇಲ್ಲದಿದ್ದಲ್ಲಿ ಪ್ಲಾಸ್ಮಾ ದಾನ ಮಾಡಲಾಗುವುದು ಎಂದು ಹೇಳಿದ್ದಾರೆ.
ಸೋಂಕಿನಿಂದ ಗುಣಮುಖರಾದ ಬಳಿಕ ಕೊರೊನಾ ಸೋಂಕು ದೃಢಪಟ್ಟ ಬಳಿಕ ತನ್ನ ಬಗ್ಗೆ ಕೆಲವು ವದಂತಿಗಳು, ಊಹಾಪೋಹಗಳು ಹಬ್ಬಿದೆ. ಅವೆಲ್ಲ ವಿಚಾರಕ್ಕೆ ಬೇಗನೇ ಸ್ಪಷ್ಟನೆ ನೀಡುತ್ತೇನೆ ಎಂದು ಕನಿಕಾ ಈ ಮೊದಲು ಟ್ವೀಟ್ನಲ್ಲಿ ಹೇಳಿದ್ದರು.
ಈಗಾಗಲೇ ದೆಹಲಿಯಲ್ಲಿ ಕೊರೊನಾ ಸೋಂಕಿತರೋರ್ವರು ಪ್ಲಾಸ್ಮಾ ಥರಪಿಯಿಂದ ಗುಣಮುಖರಾಗಿದ್ದು ಹಲವು ರಾಜ್ಯಗಳು ಪ್ಲಾಸ್ಮಾ ಥೆರಪಿ ನಡೆಸುವ ಚಿಂತನೆ ನಡೆಸಿದೆ. ದೆಹಲಿ ಮುಖ್ಯಮಂತ್ರಿ ಕೂಡಾ ಗುಣಮುಖರಾದವರು ಪ್ಲಾಸ್ಮಾ ದಾನ ಮಾಡಿ ಎಂದು ಮನವಿ ಮಾಡಿದರು. ಈಗಾಗಲೇ 350 ತಬ್ಲಿಗಿಗಳು ಪ್ಲಾಸ್ಮಾ ದಾನ ಮಾಡಲು ಮುಂದಾಗಿದ್ದಾರೆ.