ಮುಂಬೈ, ಎ.27 (Daijiworld News/MB) : ಕೊರೊನಾ ವೈರಸ್ ಲಾಕ್ಡೌನ್ ಕಾರಣದಿಂದ ಮನೆಯಲ್ಲಿಯೇ ಇರುವ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿಚಿತ್ರವಾದ ಚಾಲೆಂಜ್ಗಳು ಹುಟ್ಟುತ್ತಲ್ಲೇ ಇದೆ. ಆ ಪೈಕಿ ಕೆಲವೊಂದು ಚಾಲೆಂಜ್ಗಳು ಫೇಮಸ್ ಆಗುತ್ತಿದೆ. ಆ ಚಾಲೆಂಜ್ಗಳ ಪೈಕಿ ಪಿಲ್ಲೋ ಚಾಲೆಂಜ್ ಕೂಡಾ ಒಂದು.
ಈ ಚಾಲೆಂಜ್ಗೆ ಯುವಕ, ಯುವತಿಯರು, ಮಹಿಳೆಯರು ಮಾತ್ರವಲ್ಲದೇ ಸೆಲೆಬ್ರಿಟಿಗಳು, ಪುರುಷರು ಹಾಗೂ ಮಕ್ಕಳು ಕೂಡಾ ಫಿದಾ ಆಗಿದ್ದು ತಾವು ಬೆತ್ತಲಾಗಿ ಬಣ್ಣ ಬಣ್ಣದ ದಿಂಬುಗಳನ್ನು ಕಟ್ಟಿಕೊಂಡು ಈ ಪಿಲ್ಲೋ ಚಾಲೆಂಜ್ಗೆ ಸಾಥ್ ನೀಡಿದ್ದಾರೆ.
ಲಾಕ್ಡೌನ್ ಸಂದರ್ಭದಲ್ಲಿ "ಬಿ ದ ರಿಯಲ್ ಮ್ಯಾನ್ ಚಾಲೆಂಜ್", "ಡಾಲ್ಗೊನಾ ಕಾಫಿ ಚಾಲೆಂಜ್", "ಹೋಂ ಗಾರ್ಡನ್ ಚ್ಯಾಲೆಂಜ್" ಮೊದಲಾದವುಗಳು ಟ್ರೆಂಡ್ ಆಗಿದ್ದು ಆ ಪೈಕಿ ಪಿಲ್ಲೋ ಚಾಲೆಂಜ್ ಸೆಲೆಬ್ರೆಟಿಗಳ ನಡುವೆಯೂ ಭಾರೀ ಸುದ್ದಿಯಾಗಿದೆ.
ಹಾಲಿವುಡ್, ಟಾಲಿವುಡ್ ನಟಿಯರು ಈ ಪಿಲ್ಲೋ ಚಾಲೆಂಚ್ ಸ್ವೀಕರಿಸಿದ್ದಾರೆ. ಟಾಲಿವುಡ್ ನಟಿ ಪಾಯಲ್ ರಾಜ್ಪೂತ್, ಬಾಲಿವುಡ್ ಗಾಯಕಿ ನೇಹಾ ಕಕ್ಕರ್, ನಟಿ ತಮನ್ನಾ ಭಾಟಿಯಾ ಮೊದಲಾದವರು ದಿಂಬು ಕಟ್ಟಿ ಪೋಟೋ ತೆಗೆದು ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ ಇನ್ನು ಕೆಲವರು ಈ ಸಂಕಷ್ಟದ ಸಮಯದಲ್ಲಿ ಜನರಿಗೆ ಸಹಾಯ ಮಾಡಿ ಎಂದು ಕಾಮೆಂಟ್ ಮಾಡಿದ್ದಾರೆ.