ಮುಂಬೈ, ಎ.25 (Daijiworld News/MB) : ಕೊರೊನಾ ನಿಯಂತ್ರಣಕ್ಕಾಗಿ ದೇಶದಾದ್ಯಂತ ಲಾಕ್ಡೌನ್ ಮಾಡಲಾಗಿದ್ದು ಈ ಸಂದರ್ಭದಲ್ಲಿ ಮೊಬೈಲ್ನ್ನು ಜನರು ಹೆಚ್ಚು ಅವಲಂಬಿತರಾಗಿದ್ದಾದ್ದು ಕೊರೊನಾ ಸಂಬಂಧಿತ ವಿಷಯಗಳನ್ನೇ ಹೆಚ್ಚಾಗಿ ಓದುತ್ತಾರೆ ಎಂದು ಯಾಹೂ ಸರ್ಚ್ ಇಂಜಿನ್ನ ಮಾಹಿತಿ ಪ್ರಕಾರ ತಿಳಿದು ಬಂದಿದೆ. ಅದರಲ್ಲೂ ಮುಖ್ಯವಾಗಿ ಭಾರತದ ಮಹಿಳಾ ಸೆಲೆಬ್ರೆಟಿಗಳಲ್ಲಿ ಗಾಯಕಿ ಕನಿಕಾ ಕಪೂರ್ ಬಗ್ಗೆ ಹೆಚ್ಚು ಜನರು ಕೂತೂಹಲ ತೋರಿದ್ದಾರೆ.
ಲಾಕ್ಡೌನ್ಗಿಂತ ಮೊದಲು ಯಾಹೂ ಇಂಡಿಯಾದಲ್ಲಿ ಜನರು ನಟಿ ಪ್ರಿಯಾಂಕ ಚೋಪ್ರಾ ಬಗ್ಗೆ ಸರ್ಚ್ ಮಾಡುತ್ತಿದ್ದು ಇದೀಗ ಕೊರೊನಾ ವೈರಸ್ ಬಂದು ಗುಣಮುಖರಾದ ಗಾಯಕಿ ಕನಿಕಾರ ಬಗ್ಗೆ ಜನರು ಹೆಚ್ಚಾಗಿ ಸರ್ಚ್ ಮಾಡುತ್ತಿದ್ದಾರೆ.
ಇನ್ನು ಭಾರತದ ನಟರ ಪೈಕಿ ಜನರು ಅಮಿತಾಬ್ ಬಚ್ಚನ್ ಹಾಗೂ ರಜನಿಕಾಂತ್ ಬಗ್ಗೆ ಹೆಚ್ಚು ಸರ್ಚ್ ಮಾಡಿದ್ದು ಈವರೆಗೆ ಹೆಚ್ಚಾಗಿ ನೋಡಲಾಗುತ್ತಿದ್ದ ಬಿಗ್ ಬಾಸ್, ಡ್ರೈವ್ ಶೋಗಳ ಸ್ಥಾನವನ್ನು ರಾಮಾಯಣ ತುಂಬಿದೆ.
ಯಾಹೂ ಭಾರತದಲ್ಲಿ ಕೊರೊನಾ ಲಾಕ್ಡೌನ್ ಮೊದಲು ಹಾಗೂ ನಂತರ ಜನರು ಮುಖ್ಯವಾಗಿ ಸರ್ಚ್ ಮಾಡಿರುವ ವಿಷಯಗಳ ಕುರಿತಾಗಿ ತುಲನೆ ಮಾಡಿದ್ದು ಈ ಸಂದರ್ಭದಲ್ಲಿ ಲಾಕ್ಡೌನ್ ಮೊದಲು ದೆಹಲಿ ಚುನಾವಣಾ ಫಲಿತಾಂಶಗಳು, ದೆಹಲಿ ಗಲಭೆಗಳು, ದೆಹಲಿ ಹಿಂಸಾಚಾರ, ಜೆಎನ್ಯು ಹಿಂಸಾಚಾರ, ಡೊನಾಲ್ಡ್ ಟ್ರಂಪ್, ಅರವಿಂದ್ ಕೇಜ್ರಿವಾಲ್ ಮತ್ತು ಜ್ಯೋತಿರಾಧಿತ್ಯ ಸಿಂಧಿಯಾ ಬಗ್ಗೆ ಹುಡುಕಾಡಿದ್ದ ಜನರು ಲಾಕ್ಡೌನ್ ಬಳಿಕ, ಲಾಕ್ಡೌನ್, ಕೊರೊನಾ ಚಿಕಿತ್ಸೆ, ಸಾವಿನ ಸಂಖ್ಯೆ, ಲಸಿಕೆ, ಸಾಮಾಜಿಕ ಅಂತರ, ಹೈಡ್ರಾಕ್ಸಿಕ್ಲೋರೋಕ್ವಿನ್ ಬಗೆಗಿನ ವಿಷಯಗಳನ್ನು ಹುಡುಕಲು ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.