ಮುಂಬೈ, ಏ 22 (Daijiworld News/MSP): ಮಹಾರಾಷ್ಟ್ರದಲ್ಲಿ ಕೊರೊನಾ ಅಟ್ಟಹಾಸ ಕೈ ಮೀರಿ ಸಾಗುತ್ತಿದೆ. ದೇಶಾದ್ಯಂತ ಸೋಂಕಿತರ ಸಂಖ್ಯೆ 20 ಸಾವಿರ ದಾಟಿದ್ರೆ, ಮಹಾರಾಷ್ಟ್ರ ರಾಜ್ಯವೊಂದರಲ್ಲೇ 5 ಸಾವಿರ ಸೋಂಕಿತರಿರುವ ಬಗ್ಗೆ ವರದಿಯಾಗಿದೆ. ಕೊರೊನಾ ವಿರುದ್ಧ ಯೋಧರಂತೆ ಹೋರಾಡುತ್ತಿರುವ ಪೊಲೀಸರಿಗೆ ಬಾಲಿವುಡ್ ನಿರ್ದೇಶಕ ಮತ್ತು ನಿರ್ಮಾಪಕ ರೋಹಿತ್ ಶೆಟ್ಟಿ ಇದೀಗ ಸಹಾಯಹಸ್ತ ಚಾಚಿದ್ದು, ಪೊಲೀಸರ ವಿಶ್ರಾಂತಿಗಾಗಿಯೇ ಪ್ರತಿಷ್ಟಿತ 8 ಹೋಟೆಲ್ಗಳ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.
ಮುಂಬೈ ನಗರದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಮನೆ ಮಠ ಬಿಟ್ಟು ರಾತ್ರಿ-ಹಗಲು ಶ್ರಮಿಸುತ್ತಿರುವ ನೆರವಾಗುವ ಉದ್ದೇಶದಿಂದ ಹೋಟೆಲ್ಗಳಲ್ಲಿ ಪೊಲೀಸರು ಉಳಿದುಕೊಳ್ಳಲು ಹಾಗೂ ಸ್ನಾನ ಊಟದ ವ್ಯವಸ್ಥೆ ಮಾಡಿದ್ದಾರೆ. ಈ ಬಗ್ಗೆ ರೋಹಿತ್ ಎಲ್ಲೂ ಹೇಳಿಕೊಂಡಿಲ್ಲವಾದರೂ , ಮುಂಬೈ ಪೊಲೀಸ್ ಅಧಿಕೃತ ಟ್ವಿಟ್ಟರ್ ಖಾತೆ ಈ ವಿಚಾರವನ್ನು ಹಂಚಿಕೊಂಡು ರೋಹಿತ್ ಅವರಿಗೆ ಧನ್ಯವಾದ ಸಲ್ಲಿಸಿದೆ.
ಇದಲ್ಲದೆ ರೋಹಿತ್ ಶೆಟ್ಟಿ ಚಿತ್ರೋಧ್ಯಮದ ಕಾರ್ಮಿಕರ ಒಕ್ಕೂಟಕ್ಕೆ 51 ಲಕ್ಷ ಹಣ ದೇಣಿಗೆ ನೀಡುವ ಮೂಲಕ, ಕಷ್ಟದಲ್ಲಿರುವ ಕಾರ್ಮಿಕರಿಗೆ ಜೀವನಕ್ಕೆ ಸಹಾಯ ಮಾಡ್ತಿದ್ದಾರೆ.