ಮುಂಬೈ, ಎ.20 (Daijiworld News/MB) : ದೇಶದಲ್ಲೇ ಅತೀ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗಿರುವ ಮಹಾರಾಷ್ಟ್ರದಲ್ಲಿರುವ ಬಾಲಿವುಡ್ ನಟಿ ರಾಖಿ ಸಾವಂತ್ ಮಹಾರಾಷ್ಟ್ರದ ಜನತೆ ಮೇಲೆ ಆಕ್ರೋಶಗೊಂಡಿದ್ದು ನಾನು ನಿಮ್ಮ ಭಕ್ತೆ, ತನಗೆ ಇನ್ನು ಮಕ್ಕಳಾಗಿಲ್ಲ ನನ್ನನ್ನು ಪತಿ ಬಳಿ ಕರೆದುಕೊಂಡು ಹೋಗಿ, ಇಲ್ಲ ಚಂದ್ರನಲ್ಲಿ ಬಿಟ್ಟು ಬನ್ನಿ ಎಂದು ಮನವಿ ಮಾಡಿದ್ದಾರೆ.
ಈ ಕುರಿತಾಗಿ ಫೇಸ್ಬುಕ್ನಲ್ಲಿ ವಿಡಿಯೋ ಶೇರ್ ಮಾಡಿರುವ ರಾಖಿ, ಮುಂಬೈನಲ್ಲಿ ಇನ್ನು 6 ತಿಂಗಳು ಕೊರೊನಾ ಕಡಿಮೆಯಾಗಲ್ಲ, ಹೀಗಾಗಿ ನನ್ನನ್ನು ಶೀಘ್ರವೇ ಪ್ರೈವೇಟ್ ಜೆಟ್ನಲ್ಲೋ ಅಥವಾ ಹೆಲಿಕಾಪ್ಟರ್ನಲ್ಲೋ ಮುಂಬೈನಿಂದ ಹೊರಗೆ ಕರೆದುಕೊಂಡು ಹೋಗಿ, ಬೇರೆ ದೇಶಕ್ಕಾದರೂ ಆದೀತು. ಚಂದ್ರನಲ್ಲಿಯಾದರೂ ಬಿಟ್ಟು ಬನ್ನಿ ಎಂದು ಗೋಗರೆದು ಹೇಳಿಕೊಂಡಿದ್ದಾರೆ.
ಅಪಾರ್ಟ್ಮೆಂಟ್ನಲ್ಲಿ ಇರುವವರು ಮನೆಯಲ್ಲೇ ಇದ್ದಾರೆ ಆದರೆ ಗುಡಿಸಲಿನಲ್ಲಿ ಇರುವವರು ಸುಮ್ಮನೇ ಮನೆಯಿಂದ ಹೊರಗೆ ಬಂದು ಕೊರೊನಾ ಹರಡಲು ಕಾರಣವಾಗಿದ್ದಾರೆ. ಅವರಿಗೆ ಬುದ್ಧಿ ಇಲ್ಲ ಎಂದು ರಾಖಿ ದೂರಿದ್ದಾರೆ.
ಮೋದಿಜಿ ಚಂದ್ರನಲ್ಲಿ ಅಥವಾ ಮಂಗಳದಲ್ಲಿ ನಿಮ್ಮ ಮನೆಯಿದೆಯೇ. ಇದ್ದರೆ ನನ್ನನ್ನು ಕಳುಹಿಸಿಕೊಡಿ. ನಮ್ಮ ಸಿಎಂ ತುಂಬಾ ಸೌಮ್ಯ ಹೀಗಾಗೀ ಹೀಗೆ ದಾರಿಯಲ್ಲಿ ಓಡಾಡುವವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಚೀನಾದಲ್ಲಿ ಕೊರೊನಾ ವೈರಸ್ ಮೊದಲ ಬಾರಿ ಪತ್ತೆಯಾಗಿ ಜನರು ವೈರಸ್ನಿಂದಾಗಿ ಮೃತಪಡಲು ಆರಂಭಿಸಿದಾಗ ರಾಖಿ ಸಾವಂತ್ ತಾನು ನಾಸಾದಿಂದ ಕೊರೊನಾ ನಾಶ ಮಾಡಲು ಔಷಧ ತರಿಸಿರುವುದಾಗಿ ಹೇಳಿ, ಚೀನಾಕ್ಕೆ ತೆರಳಿ ಅಲ್ಲಿನ ವಿಡಿಯೋ ಮಾಡಿ ಇನ್ಸ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ಆ ಬಳಿಕ ಚೀನಾದಲ್ಲಿ ಕೊರೊನಾ ವೈರಸ್ ನಾಶ ಮಾಡಿದೆ ಎಂದು ಹೇಳಿ ಅದರ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಇದೀಗ ಕೊರೊನಾ ವೈರಸ್ ಮಹಾರಾಷ್ಟ್ರದಲ್ಲಿ 6 ತಿಂಗಳವರೆಗೆ ಇರುತ್ತದೆ ಎಂದು ಹೇಳುತ್ತಿರುವ ರಾಖಿ ತನ್ನ ಪತಿಯಲ್ಲಿಗೆ ಕರೆದುಕೊಂಡು ಹೋಗುವಂತೆ ಮೋದಿಗೆ ಮನವಿ ಮಾಡಿದ್ದಾರೆ.
ರಾಖಿ ಸಾವಂತ್ 2019ರ ಜುಲೈ 28ರಂದು ಮುಂಬೈನ ಜೆ.ಡಬ್ಲೂ ಮ್ಯಾರಿಯಟ್ ಹೋಟೆಲ್ನಲ್ಲಿ ಮದುವೆಯಾಗಿರುವುದಾಗಿ ಹೇಳಿಕೊಂಡಿದ್ದು ಇನ್ಸ್ಟಾಗ್ರಾಂನಲ್ಲಿ ಯಾವಾಗಲೂ ತನ್ನ ಪತಿ ರಿತೇಶ್ ಬಗ್ಗೆ ಮಾತನಾಡುತ್ತಿರುತ್ತಾರೆ. ಆದರೆ ಈವರೆಗೂ ಫೋಟೋವನ್ನು ರಿವೀಲ್ ಮಾಡಿಲ್ಲ.