ಮುಂಬೈ, ಎ.17 (DaijiworldNews/PY) : ಲಾಕ್ಡೌನ್ನಿಂದಾಗಿ ಅನೇಕ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದೂ, ಈ ಪೈಕಿ ಬಾಲಿವುಡ್ನ ಕಿರುತೆರೆ ಜೋಡಿಯೊಂದು ರಿಜಿಸ್ಟರ್ ಮ್ಯಾರೇಜ್ ಆಗಿದ್ದು, ವಿವಾಹ ಕಾರ್ಯಕ್ರಮಕ್ಕೆ ಖರ್ಚು ಮಾಡಬೇಕೆಂದಿದ್ದ ಹಣವನ್ನು ದಾನ ನೀಡಲು ಮುಂದಾಗಿದ್ದಾರೆ.
ನಟಿ ಪೂಜಾ ಬ್ಯಾನರ್ಜಿ ತಮ್ಮ ಬಹುಕಾಲದ ಗೆಳೆಯ ಕುನಾಲ್ ವರ್ಮಾರನ್ನು ವರಿಸಿದ್ದಾರೆ. ಎ.೧೫ರಂದು ಈ ಜೋಡಿಯು ಅದ್ದೂರಿಯಾಗಿ ಮದುವೆಯಾಗಲು ತಯಾರಿ ನಡೆಸಿತ್ತು. ಆದರೆ ಕೊರೊನಾ ಲಾಕ್ಡೌನ್ ಜಾರಿಯಲ್ಲಿರುವ ಕಾರಣ ಇಬ್ಬರೂ ತಮ್ಮ ವಿವಾಹವನ್ನು ಕ್ಯಾನ್ಸಲ್ ಮಾಡಿದ್ದಾರೆ. ಈಗ ಇವರಿಬ್ಬರೂ ಮದುವೆಯಾಗಿದ್ದು, ತಮ್ಮ ವಿವಾಹದ ವಿಚಾರವಾಗಿ ಪೂಜಾ ಬ್ಯಾನರ್ಜಿ ಅಧಿಕೃತವಾಗಿ ಬಹಿರಂಗಪಡಿಸಿದ್ದಾರೆ.
ಸುಮಾರು ೧೦ ವರ್ಷಗಳ ಕಾಲ ಪೂಜಾ ಬ್ಯಾನರ್ಜಿ ಹಾಗೂ ಕುನಾಲ್ ವರ್ಮಾ ಡೇಟಿಂಗ್ನಲ್ಲಿದ್ದರು. ಅಲ್ಲದೇ, ಕೆಲವು ತಿಂಗಳುಗಳ ಹಿಂದೆ ಇವರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇವರಿಬ್ಬರು ಒಂದು ತಿಂಗಳ ಹಿಂದೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಎ.೧೫ರಂದು ಅದ್ದೂರಿಯಾಗಿ ವಿವಾಹ ಕಾರ್ಯಕ್ರಮ ಮಾಡಬೇಕೆಂದುಕೊಂಡಿದ್ದು, ಇದಕ್ಕೆ ತಯಾರಿಯೂ ಮಾಡಿಕೊಂಡಿದ್ದರು. ಆದರೆ, ಲಾಕ್ಡೌನ್ ಜಾರಿಯಲ್ಲಿರುವ ಕಾರಣ ಅದ್ದೂರಿಯಾಗಿ ಮದುವೆ ಕಾರ್ಯಕ್ರಮ ನಡೆಸಲು ಆಗಲಿಲ್ಲ. ಈ ವಿಚಾರಚಾಗಿ ಇನ್ಸ್ಟಾಗ್ರಾಂನಲ್ಲಿ ನಟಿ ಪೂಜಾ ಬ್ಯಾನರ್ಜಿ ಹೇಳಿಕೊಂಡಿದ್ದಾರೆ.
ಎ,೧೫ರಂದು ನಮ್ಮ ಮದುವೆ ಸಂಭ್ರಮ ನೆರವೇರಬೇಕಿತ್ತು. ಆದರೆ, ನಾವೇ ಅದ್ದೂರಿ ವಿವಾಹ ಕಾರ್ಯಕ್ರಮವನ್ನು ಕ್ಯಾನ್ಸಲ್ ಮಾಡಿದ್ದೆವು. ಒಂದು ತಿಂಗಳ ಹಿಂದೆಯೇ ನಾವು ರಿಜಿಸ್ಟರ್ ಮ್ಯಾರೇಜ್ ಆಗಿದ್ದೆವು. ಹಾಗಾಗಿ ಈಗ ನಾವು ಅಧಿಕೃತವಾಗಿ ಗಂಡ-ಹೆಂಡತಿ. ನಮ್ಮ ಪೋಷಕರು, ಅಜ್ಜಿ-ಅಜ್ಜ ಆಶೀರ್ವಾದ ಹಾಗೂ ಶುಭಾಶಯಗಳೊಂದಿಗೆ ನಾವು ಹೊಸ ನಮ್ಮ ಜೀವನವನ್ನು ಪ್ರಾರಂಭಿಸುತ್ತಿದ್ದೇವೆ. ಇದರಿಂದ ನಮ್ಮ ಕುಟುಂಬದವರು ಖುಷಿಯಿಂದ ಇದ್ದಾರೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ಇಡೀ ದೇಶ ಕೊರೊನಾ ವಿರುದ್ದ ಹೋರಾಟ ನಡೆಸುತ್ತಿದೆ. ಕೊರೊನಾ ವಿರುದ್ದ ಹೋರಾಡುತ್ತಿರುವ ಪ್ರತಿಯೊಬ್ಬರು ಬೇಗನೇ ಚೇತರಿಸಿಕೊಳ್ಳಲಿ ಎಂದು ನಾನು ದೇವರಲ್ಲಿ ಬೇಡಿಕೊಳ್ಳುತ್ತೇನೆ. ನಮ್ಮ ಮದುವೆ ಕಾರ್ಯಕ್ರಮಕ್ಕೆ ಖರ್ಚು ಮಾಡಬೇಕೆಂದುಕೊಂಡಿದ್ದ ಹಣವನ್ನು ಅಗತ್ಯವಿರುವವರಿಗೆ ದಾನ ಮಾಡುತ್ತಿದ್ದೇವೆ ಇದು ನಮ್ಮ ಕಡೆಯಿಂದ ಒಂದು ಸಣ್ಣ ಕೊಡುಗೆ. ಓ ಪರಿಸ್ಥಿತಿಯಲ್ಲಿ ವಿವಾಹ ಆಚರಿಸುವುದು ಸರಿಯಲ್ಲ. ಜಗತ್ತು ಮೊದಲಿನ ಸ್ಥಿತಿಗೆ ಮರಳುವಂತಾಗಬೇಕು ಎಂದು ಬಯಸುತ್ತೇನೆ ಎಂದು ಇನ್ಸ್ಟಾಗ್ರಾಂನಲ್ಲಿ ಬರೆದಿದ್ದಾರೆ.