ಮುಂಬೈ, ಎ.14 (Daijiworld News/MB) : ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ದೇಶದಲ್ಲಿ ಲಾಕ್ಡೌನ್ ಮಾಡಲಾಗಿದ್ದು ಹೆಚ್ಚಿನ ಜನರು ಲಾಕ್ಡೌನ್ ಮುಗಿದು ಮನೆಯಿಂದ ಹೊರಗೆ ಹೋಗಬೇಕು, ಶಾಪಿಂಗ್ ಮಾಡಬೇಕು, ಸಿನಿಮಾ ನೋಡಬೇಕು ಎಂದು ಆಲೋಚಿಸುತ್ತಿರುವಾಗ ಬಾಲಿವುಡ್ನ ಮಾದಕ ನಟಿ ಸನ್ನಿ ಲಿಯೋನ್ ಮಾತ್ರ ಬೇರೆಯೇ ಪ್ಲ್ಯಾನ್ ಮಾಡಿದ್ದು ಈ ಕುರಿತಾಗಿ ಸಂದರ್ಶನ ಒಂದರಲ್ಲಿ ತಿಳಿಸಿದ್ದಾರೆ.
ಲಾಕ್ಡೌನ್ ಕುರಿತಾಗಿ ಮಾತನಾಡಿದ ಅವರು, ಲಾಕ್ಡೌನ್ ಮುಗಿದ ಕೂಡಲೇ ನಾನು ಮೊದಲು ಮಾಡುವ ಕೆಲಸ ನನ್ನ ಮೂವರು ಮಕ್ಕಳನ್ನು ಶಾಲೆಗೆ ಡ್ರಾಪ್ ಮಾಡಿ ಮನೆಗೆ ಬಂದು ಆರಾಮವಾಗಿ ಉಸಿರಾಡಬೇಕು ಎಂದು ಹೇಳಿದ್ದಾರೆ.
ನನ್ನ ಮೂವರು ಮಕ್ಕಳು ಬಹಳ ತುಂಟರು. ಮನೆಯಲ್ಲಿ ಯಾವಾಗಲೂ ಗಲಾಟೆ ಮಾಡುತ್ತಲ್ಲೇ ಇರುತ್ತಾರೆ. ಅವರನ್ನು ಹಾಗೆಯೇ ಬಿಟ್ಟು ಹೋಗುವಂತೆ ಇಲ್ಲ. ನಿರಂತರವಾಗಿ ಯಾರದರೂ ಇರಲೇ ಬೇಕಾಗುತ್ತದೆ. ಲಾಕ್ಡೌನ್ ಮುಗಿದ ಕೂಡಲೇ ಮೊದಲು ಅವರನ್ನು ಶಾಲೆಗೆ ಬಿಟ್ಟು ನಾನು ಮನೆಗೆ ಬಂದು ನೆಮ್ಮದಿಯ ನಿಟ್ಟುಸಿರು ಬಿಡಬೇಕು ಎಂದು ಹೇಳಿದ್ದಾರೆ.
ನನ್ನ ಮೊದಲ ಮಗು ಬೆಳಿಗ್ಗೆ 6:30ಕ್ಕೆ ಏಳುವಾಗ ನಾನು ಕೂಡಾ ಏಳುತ್ತೇನೆ. 30 ನಿಮಿಷ ವ್ಯಾಯಾಮ ಮಾಡಿ ನನ್ನ ಮೂವರು ಮಕ್ಕಳು ಎದ್ದಾಗ ಅವರನ್ನು ವಾಕಿಂಗ್ಗೆ ಕರೆದುಕೊಂಡು ಹೋಗುತ್ತೇನೆ. ನಂತರ ಬಂದು ತಿಂಡಿ ತಿಂದು ಚಾಟ್ ಮಾಡುತ್ತೇನೆ. ಬಳಿಕ ಮಕ್ಕಳಿಗೆ ಊಟ ಮಾಡಿಸಿ ಅವರನ್ನು ಆಟವಾಡಿಸುತ್ತೇನೆ. ಹೀಗೆ ಪ್ರತಿದಿನ ಅವರನ್ನು ಬ್ಯುಸಿಯಾಗಿ ಇಡುವಂತೆ ನೋಡಿಕೊಳ್ಳುತ್ತೇನೆ ಎಂದು ತನ್ನ ದಿನಚರಿ ಬಗ್ಗೆ ತಿಳಿಸಿದ್ದಾರೆ.
ಕೊರೊನಾ ಲಾಕ್ಡೌನ್ ಆಗಿದ್ದರೂ ಕೂಡಾ ನಿರಂತರವಾಗಿ ತನ್ನ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುವ ಸನ್ನಿ ಲಾಕ್ಡ್ ಅಪ್ ವಿತ್ ಸನ್ನಿ ಎಂಬ ಇನ್ಸ್ಟಾ ಲೈವ್ ಕಾರ್ಯಕ್ರಮವನ್ನು ಮಾಡುತ್ತಿದ್ದಾರೆ.