ಮುಂಬೈ, ಎ.12 (Daijiworld News/MB) : ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಈವರೆಗೆ ತಿಳಿಸದ ವಿಷಯವನ್ನು ಬಹಿರಂಗ ಪಡಿಸಿದ್ದು ತಾನು ಮೂರು ಬಾರಿ ವಿವಾಹವಾಗಿದ್ದೆ ಎಂಬ ಅಚ್ಚರಿಯ ವಿಷಯ ತಿಳಿಸಿದ್ದಾರೆ.
ಧರ್ಮದ ಎಲ್ಲಾ ಹಂದರಗಳನ್ನು ಮೀರಿ ಅಂತರ್ ಧರ್ಮೀಯ ಯುವತಿಯನ್ನು ಪ್ರೇಮ ವಿವಾಹವಾದ ಶಾರುಖ್ ಖಾನ್ ವಿವಾಹದ ಬಗ್ಗೆ ಸಾಕಷ್ಟು ಚರ್ಚೆಗಳಾಗಿದ್ದವು. ಆದರೆ ಇವನ್ನೆಲ್ಲಾ ಮೀರಿ ಈ ಜೋಡಿ 29 ವರ್ಷಗಳ ಕಾಲ ಸುಖ ಸಂಸಾರ ನಡೆಸಿದ್ದಾರೆ. ಇದೀಗ ಶಾರುಖ್ ತಾನು ಮೂರು ಬಾರಿ ವಿವಾಹವಾದ ಬಗ್ಗೆ ಸಂದರ್ಶನವೊಂದರಲ್ಲಿ ವಿವರಿಸಿದ್ದಾರೆ.
ಶಾರುಖ್ ಖಾನ್ ಅವರು ದೆಹಲಿಯಲ್ಲಿದ್ದಾಗ ಗೌರಿ ಖಾನ್ ಅವರೊಂದಿಗೆ ಸ್ನೇಹವಾಯಿತು. . ನಂತರದ ದಿನಗಳಲ್ಲಿ ಅವರಿಬ್ಬರ ಸ್ನೇಹ ಪ್ರೇಮವಾಗಿ ಬದಲಾಗಿದ್ದು ವಿವಾಹವಾಗುವ ನಿರ್ಧಾರ ಮಾಡಿಕೊಂಡರು. ಆದರೆ ಮೂರು ಬಾರಿ ವಿವಾಹವಾದರು.
ಶಾರುಖ್ ಅವರ ಪತ್ನಿ ಗೌರಿ ಖಾನ್ ಪಂಜಾಬಿ ಹಿಂದೂ ಹುಡುಗಿ. ಇಬ್ಬರು ೨ ಧರ್ಮದ ಸಂಪ್ರದಾಯದಂತೆ ಮದುವೆಯಾಗಬೇಕು ಎಂದು ನಿರ್ಧರಿಸಿದ್ದರು.ಖಾನ್ ದಂಪತಿ 25 ಅಕ್ಟೋಬರ್ 1991ರಂದು ಮೊದಲು ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಇದಾದ ಬಳಿಕ ಮುಸ್ಲಿಂ ಸಂಪ್ರದಾಯದಂತೆ ವಿವಾಹವಾದರು. ನಂತರ ಕೊನೆಯದಾಗಿ ಸಾಂಪ್ರದಾಯಿಕ ಹಿಂದೂ ಪದ್ಧತಿಯಲ್ಲಿ ವಿವಾಹವಾದರು. ಈ ರೀತಿ ಮೂರು ಬಾರಿ ವಿವಾಹವಾದ ಜೋಡಿ ಖಾನ್ ದಂಪತಿಗಳು.
ಗೌರಿ ಖಾನ್ ಅವರ ಮೂಲ ಹೆಸರು ಗೌರಿ ಚಿಬ್ಬರ್ ಆಗಿದ್ದು ಗೌರಿಯವರು ಮದುವೆಯ ನಂತರವೂ ಹಿಂದೂ ಮತ್ತು ಮುಸ್ಲಿಂ ಧರ್ಮಗಳನ್ನು ಅನುಸರಿಸುತ್ತಿದ್ದಾರೆ. ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರು ಮೂವರು ಮಕ್ಕಳ ಪೋಷಕರಾಗಿದ್ದು, ಹಿರಿಯ ಮಗ ಆರ್ಯನ್ ಖಾನ್, ಮಗಳು ಸುಹಾನಾ ಖಾನ್ ಮತ್ತು ನಂತರ 2013 ರಲ್ಲಿ ಇಬ್ಬರೂ ಬಾಡಿಗೆ ತಾಯಿಯ ಮೂಲಕ ಮಗ ಅಬ್ರಾಮ್ಗೆ ಜನ್ಮ ನೀಡಿದ್ದಾರೆ. ಈಗಲೂ ಎರಡೂ ಧರ್ಮದ ಸಂಪ್ರದಾಯವನ್ನು ಈ ಕುಟುಂಬ ಪಾಲಿಸುತ್ತಿದೆ.