ಬೆಂಗಳೂರು, ಎ.11 (Daijiworld News/MB) : ಸ್ಯಾಂಡಲ್ವುಡ್ ಬ್ಯೂಟಿಕ್ವೀನ್ ರಮ್ಯ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದು ಮತ್ತೆ ಸಾಮಾಜಿಕ ಜಾಲತಾಣಕ್ಕೆ ವಾಪಸ್ ಬಂದಿದ್ದಾರೆ. ಅವರ ಟ್ವಿಟ್ಟರ್ ಖಾತೆ ಈಗ ಸಕ್ರಿಯವಾಗಿದೆ.
ಸ್ಯಾಂಡಲ್ವುಡ್ನ ಬಹುಬೇಡಿಕೆಯ ನಟಿಯಾಗಿದ್ದ ರಮ್ಯಾ, ಸದ್ಯ ಯಾವುದೇ ಸಿನಿಮಾಗಳಲ್ಲೂ ಕಾಣಿಸುತ್ತಿಲ್ಲ. ಸಿನಿಮಾದ ಹೊರತಾಗಿ ರಾಜಕೀಯದಲ್ಲೂ ಸದ್ದು ಮಾಡಿರುವ ರಮ್ಯಾ ಇದ್ದಕ್ಕಿದ್ದಂತೆ ರಾಜಕೀಯದಲ್ಲೂ ಕಾಣೆಯಾಗಿದ್ದಾರೆ. ಆದರೆ ಇದೀಗ ಅವರು ಮತ್ತೆ ಸಾಮಾಜಿಕ ಜಾಲತಾಣಕ್ಕೆ ಎಂಟ್ರಿ ಕೊಟ್ಟಿದ್ದು ಟ್ವಿಟ್ಟರ್ ಖಾತೆಯಲ್ಲಿ ಸಕ್ರಿಯರಾಗಿದ್ದಾರೆ.
ರಮ್ಯಾ ರಾಜಕೀಯ ಜೀವನ ಆರಂಭಗೊಂಡ ಬಳಿಕ ಟ್ವೀಟರ್ ಖಾತೆಯಲ್ಲಿ ತಾನು ಮಾಡುವ ಟ್ವೀಟ್ಗಳಿಂದಲ್ಲೇ ಸುದ್ದಿಯಾಗಿದ್ದು ಲೋಕಸಭೆ ಚುನಾವಣೆಯ ಫಲಿತಾಂಶದ ನಂತರ ತಮ್ಮ ಟ್ವಿಟ್ಟರ್ ಖಾತೆಯನ್ನು ಡೀ ಆಕ್ಟಿವೇಟ್ ಮಾಡಿದ್ದರು.
ಮತ್ತೆ ತಮ್ಮ ಟ್ವಿಟ್ಟರ್ ಖಾತೆಗೆ ಮರಳಿರುವ ಅವರು ಯಾವುದೇ ಹೊಸ ಟ್ವೀಟ್ ಮಾಡಿಲ್ಲ. ಆದರೆ ಅವರ ಅಕೌಂಟ್ ಆ್ಯಕ್ಟಿವ್ ಆಗಿದೆ. ರಮ್ಯಾ ಅವರು ಕೊನೆಯದಾಗಿ 2019ರ ಜೂನ್ 1ರಂದು ಕೊನೆಯ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ನಲ್ಲಿ ಕಳೆದು ಹೋದ ಶ್ವಾನದ ಒಂದು ಫೋಟೋ ಹಾಕಿ ಈ ನಾಯಿ ಕಳೆದು ಹೋಗಿದೆ ಪ್ಲೀಸ್ ವಿಟೋವನ್ನು ಹುಡುಕಲು ನನಗೆ ಸಹಾಯ ಮಾಡಿ ಎಂದು ಬರೆದುಕೊಂಡಿದ್ದರು.