ಬೆಂಗಳೂರು, ಎ.10 (Daijiworld News/MB) : ಸಾದಾ ವಿಭಿನ್ನ ಪಾತ್ರಗಳಲ್ಲೇ ಕಾಣಿಸಿಕೊಳ್ಳುವ ಬೆಂಗಾಲಿ ಬೆಡಗಿ ಪ್ರಿಯಾಂಕ ಉಪೇಂದ್ರರವರು ಇದೀಗ ಹೊಸ ಸಿನಿಮಾದಲ್ಲಿ ನಟಿಸಲಿದ್ದು ಆ ಕುರಿತಾಗಿ ಮಾಹಿತಿ ನೀಡಿದ್ದಾರೆ.
ಎಚ್2ಓ ಚಿತ್ರದ ಮೂಲಕ ಹೆಚ್ಚು ಜನಪ್ರಿಯತೆ ಪಡೆದ ಪ್ರಿಯಾಂಕಾ, ರವಿಚಂದ್ರನ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ವಿಷ್ಣುವರ್ಧನ್ ಅವರೊಂದಿಗೆ ಹಲವು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಉಪ್ಪಿ-2, ಪ್ರಿಯಾಂಕಾ, ಮಮ್ಮಿ, ದೇವಕಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿ ಜನ ಮನ ಗೆದ್ದಿರುವ ಇವರು ಸೇಂಟ್ ಮಾರ್ಕ್ಸ್ ರೋಡ್’ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಈ ಸಿನಿಮಾ ಕನ್ನಡ ಹಾಗೂ ತಮಿಳು ಎರಡು ಭಾಷೆಗಳಲ್ಲಿ ತಯಾರಾಗುತ್ತಿದ್ದು ಇದರಲ್ಲಿ ಪ್ರಿಯಾಂಕ ಎರಡು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚರ್ಚ್ ಬೀದಿಯಲ್ಲಿ ನಡೆಯುವ ನೈಜ ಘಟನೆಯನ್ನಾಧರಿಸಿ ಈ ಚಿತ್ರದ ಕಥೆ ಹೆಣೆಯಲಾಗಿದ್ದು, ಮ್ಯಾಗ್ವೆನ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರಲಿದೆ.
ಇದೊಂದು ಹಾರರ್ ಜಾನರ್ ಚಿತ್ರ, ನನ್ನ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ಡಬಲ್ ರೋಲ್ನಲ್ಲಿ ನಟಿಸುತ್ತಿದ್ದೇನೆ. ಕ್ರಿಶ್ಚಿಯನ್ ಅವಳಿ ಸೋದರಿಯರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಸಿನಿಮಾ ಎರಡು ಭಾಷೆಗಳಲ್ಲಿ ತಯಾರಾಗುತ್ತಿರುವುದರಿಂದ ಪಾತ್ರಕ್ಕಾಗಿ ಈಗಲೇ ಸಿದ್ಧತೆ ಮಾಡಿಕೊಳ್ಳಬೇಕಿದೆ. ನಿರ್ದೇಶಕರು ಚಿತ್ರದ ಕಥೆ ರಚಿಸುತ್ತಿದ್ದು ಲಾಕ್ಡೌನ್ ಮುಕ್ತಾಯಗೊಂಡ ಬಳಿಕ ಚಿತ್ರೀಕರಣ ಆರಂಭವಾಗಲಿದೆ. ಈ ಸಿನಿಮಾದಲ್ಲಿ ನನ್ನದು ವಿಭಿನ್ನ ಪಾತ್ರವಾದ್ದರಿಂದ ಕುತೂಹಲ ಅಧಿಕವಾಗಿದೆ ಎಂದು ಹೇಳುತ್ತಾರೆ ಪ್ರಿಯಾಂಕಾ.