ಮುಂಬೈ,ಮಾ 31 (Daijiworld News/MSP): ನೇರ ಮಾತುಗಾರಿಕೆ ಹಾಗೂ ತಮ್ಮ ಅದ್ಬುತ ನಟನಾ ಪ್ರತಿಭೆಯಿಂದಲೇ ಖ್ಯಾತಿ ಪಡೆದಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಲಾಕ್ ಡೌನ್ ವೇಳೆ ತನ್ನ ಜೀವನದ ಕೆಟ್ಟ ಕಾಲಘಟ್ಟದ ಬಗ್ಗೆ ಮಾತನಾಡಿದ್ದಾರೆ.
ಲಾಕ್ ಡೌನ್ ನಂತಹ ಇಂದಿನ ಪರಿಸ್ಥಿತಿ ಬಗ್ಗೆ ಹಲವರು ಕಣ್ಣೀರು ಸುರಿಸುತ್ತಿರಬಹುದು. ಆದರೆ ಸಮಯ ಎಂದೆಂದಿಗೂ ಕೆಟ್ಟದಾಗಿರುವುದಿಲ್ಲ, ಕೆಟ್ಟ ಸಮಯವನ್ನು ಎಂದಿಗೂ ಕೆಟ್ಟದಾಗಿರುವುದಿಲ್ಲ. ಆದ್ರೆ ನಿಜವಾದ ವಿಚಾರ ಎಂದರೆ ಕೆಟ್ಟ ಸಮಯವೇ ಒಳ್ಳೆಯ ಸಮಯವಾಗಿರುತ್ತದೆ ಎಂದು ಬರೆದುಕೊಂಡು ತಮ್ಮ ಜೀವನದ ಕೆಟ್ಟ ಕಾಲದ ಬಗ್ಗೆ ಹೇಳಿಕೊಂಡಿದ್ದಾರೆ.
ತನ್ನೂರು ಹಿಮಾಚಲದಿಂದ ಮನೆ ಬಿಟ್ಟು ಓಡಿ ಬಂದಾಗ ನನ್ನ ವಯಸ್ಸು 15-16 ಇರಬಹುದು. ಮನೆ ಬಿಟ್ಟ ಬಳಿಕ ನಾನು ಒಂದೆರಡು ವರ್ಷದೊಳಗೆ ಸಿನಿಮಾ ಸ್ಟಾರ್ ಆಗಿಬಿಟ್ಟೆ. ಮಾತ್ರವಲ್ಲ ಡ್ರಗ್ ಅಡಿಕ್ಟ್ ಕೂಡಾ ಆಗಿಬಿಟ್ಟೆ. ನನ್ನ ಜೀವನದಲ್ಲಿ ಏಳುಬೀಳುಗಳನ್ನು ಕಂಡು ಇದಕ್ಕೆಲ್ಲಾ ಸಾವೊಂದೇ ಮಾರ್ಗ ಎಂದು ಅನ್ನಿಸುತ್ತಿತ್ತು. ಇವೆಲ್ಲವೂ ನಾನು ಟೀನೇಜರ್ ಆಗಿದ್ದ ವೇಳೆಯೇ ನನ್ನ ಜೀವನದಲ್ಲಿ ಘಟಿಸಿತ್ತು.
ಈ ಸಂದರ್ಭದಲ್ಲೇ ನನ್ನ ಜೀವನದಲ್ಲಿ ಓರ್ವ ಉತ್ತಮ ಸ್ನೇಹಿತರ ಎಂಟ್ರಿ ಆಗಿತ್ತು. ಆದರೆ ವೃತ್ತಿಯಲ್ಲಿ ಫೈಟ್ ಮಾಸ್ಟರ್ ಆಗಿದ್ದ ಅವರು ತಮ್ಮ ಜೀವನದಲ್ಲಿ ತುಂಬಾ ಕಷ್ಟಪಡುತ್ತಿದ್ದರು. ಇದೇ ವೇಳೇ ನನಗೆ ಅವರು ಯೋಗ ಕಲಿಸಲು ಪ್ರಾರಂಭಿಸಿದರು. ಒಂದು ದಿನ ಅವರು ದ್ಯಾನ ಮಾಡಲು ಕಣ್ಣು ಮುಚ್ಚಿ ಕುಳಿತುಕೊಳ್ಳಲು ಹೇಳಿದರು. ನಾನು ಕಣ್ಣುಗಳನ್ನು ಮುಚ್ಚುತ್ತಲೇ ನನಗೆ ಅಳು ಬಂತು. ಇದನ್ನು ಕಂಡು ಅವರೂ ಕೂಡ ಗಲಿಬಿಲಿಗೊಂಡರು. ಕಣ್ಣು ಮುಚ್ಚದೆ ದ್ಯಾನ ಅಭ್ಯಾಸಿಸಲು ಸಾಧ್ಯವಿಲ್ಲ ಎಂದು ಮನವರಿಕೆ ಮಾಡಿ, ಪುಸ್ತಕವೊಂದನ್ನು ನೀಡಿ ಅದನ್ನು ಓದಲು ಹೇಳಿದರು. ಅಂದಿನಿಂದ ನನ್ನ ಜೀವನವ ಕೊಂಚ ಸುಧಾರಣೆ ಕಂಡಿತು. ಇಂದಿಗೂ ನಾನು ಅವರನ್ನು ಮತ್ತು ಸ್ವಾಮಿ ವಿವೇಕಾನಂದರನ್ನು ನನ್ನ ಗುರುವೆಂದು ಭಾವಿಸಿರುವೆನು ಎಂದು ಬರೆದುಕೊಂಡಿದ್ದಾರೆ.