ನವದೆಹಲಿ,ಮಾ.30 (Daijiworld News/MB) : ಕೊರೊನಾ ವಿರುದ್ಧ ಹೋರಾಡಲು ಬರೋಬ್ಬರಿ 25 ಕೋಟಿ ರೂ.ಗಳ ಸಹಾಯ ಧನ ನೀಡುವ ಮೂಲಕ ಬಾಲಿವುಡ್ ನಟ ಅಕ್ಷಯ್ ಕುಮಾರ್ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದೀಗ ಪತ್ನಿಗಾಗಿ ಲಾಕ್ ಡೌನ್ ನಡುವೆ ಕಾರು ರಸ್ತೆಗಳಿಸಿದ್ದು ಈ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ.
ಅಕ್ಮಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ ಅವರ ಕಾಲಿನ ಮೂಳೆಗೆ ಪೆಟ್ಟಾಗಿದ್ದು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾದ ಅನಿವಾರ್ಯ ಸಂದರ್ಭದಲ್ಲಿ ಅಕ್ಷಯ್ ಕುಮಾರ್ ಅವರು ಕಾರು ಚಲಾಯಿಸಿದ್ದು ಟ್ವಿಂಕಲ್ ಖನ್ನಾ ಈ ಕುರಿತು ಟ್ವೀಟ್ ಮಾಡಿದ್ದಾರೆ.
ಟ್ವಿಂಕಲ್ ಖನ್ನಾ ಅವರು ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದು, ನಾವು ಆಸ್ಪತ್ರೆಯಿಂದ ಹಿಂದಿರುಗುವಾಗ ರಸ್ತೆ ಹೀಗಿದ್ದವು. ದಯವಿಟ್ಟು ಗಾಬರಿಯಾಗಬೇಡಿ ನಾನು ಬಕೆಟ್ ಒದಿಯುವ ಕುರಿತು ಮಾತನಾಡುತ್ತಿಲ್ಲ. ಏಕೆಂದರೆ ಈ ಸಂದರ್ಭದಲ್ಲಿ ಏನನ್ನೂ ಒದಿಯಲು ನನ್ನಿಂದ ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ.
ಇನ್ನೊಂದು ಪೋಸ್ಟ್ ಮಾಡಿದ್ದು ಕರಣ್ ಕಪಾಡಿಯಾ ಅವರ ಸಲಹೆ ಮೇರೆಗೆ ಮಕ್ಕಳು ನನ್ನ ಕಾಲಿನ ಮೇಲೆ ಟಿಕ್-ಟಾಕ್-ಟೋ ಆಡಿದ್ದಾರೆ. ಕಾಲು ಮುರಿಯಲು ಎಂದಿಗೂ ಉತ್ತಮ ಸಮಯವಲ್ಲ. ಏಕೆಂದರೆ ನಾನಾದರೂ ಎಲ್ಲಿಗೆ ಹೋಗುತ್ತಿದೆ ಎಂದಿದ್ದಾರೆ.
ಇನ್ನು ಈ ಪೋಸ್ಟ್ ನೋಡಿ ಪ್ರತಿಕ್ರಿಯಿಸಿರುವ ಹಲವರು ಶೀಘ್ರ ಗುಣಮುಖರಾಗಿ, ಜಾಗೃತರಾಗಿರಿ ಎಂದು ಹೇಳಿದ್ದು ಇನ್ನು ಕೆಲವರು ಏನಾಯಿತು, ಹೇಗಾಯಿತು ಎನ್ನುವ ಪ್ರಶ್ನೆಗಳನ್ನು ಕೇಳಿದ್ದಾರೆ.