ಮುಂಬೈ, ಮಾ 28 (Daijiworld News/MSP): ಕೊರೊನಾ ವೈರಸ್ ಲೌಕ್ ಡೌನ್ ಹಿನ್ನಲೆಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ.
ಸೆಲೆಬ್ರಿಟಿ ದಂಪತಿಗಳಿಬ್ಬರು ಮನೆಯಲ್ಲಿ ಕಾಲಹರಣ ಮಾಡುವ ಸಮಯದ ಇಂಟ್ರೆಸ್ಟಿಂಗ್ ಮಾಹಿತಿಯನ್ನು ಅನುಷ್ಕಾ ಹಂಚಿಕೊಂಡಿದ್ದಾರೆ.
ಈ ಲಾಕ್ ಡೌನ್ ಹಿನ್ನಲೆಯಲ್ಲಿ ನನ್ನ ಹೇರ್ ಸ್ಟೈಲ್ ಹಾಳಾಗಿತ್ತು. ಕ್ಷೌರಕ್ಕೆ ಹೊರಗೆ ಹೋಗುವಂತಿಲ್ಲ. ಸೆಲೂನ್ ಪಾರ್ಲರ್ ಕೂಡಾ ತೆರೆದಿಲ್ಲ ಹೀಗಾಗಿ ಪತ್ನಿಯೇ ಹೇರ್ ಸ್ಟೆಲ್ ಮಾಡಲಿ ಎಂದು ಯೋಚಿಸಿದ್ದಾರೆ ವಿರಾಟ್.
ಇದಕ್ಕೆ ಸೈ ಎಂದ ಪತ್ನಿ ಅನುಷ್ಕಾ ಶರ್ಮಾ, ಪತಿ ವಿರಾಟ್ ಕೊಹ್ಲಿ ಹೇರ್ ಸ್ಟೈಲ್ ಮಾಡಿದ್ದು ಇದ್ರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಖುರ್ಚಿ ಮೇಲೆ ವಿರಾಟ್ ಕುಳಿತಿದ್ದು. ಅನುಷ್ಕಾ ಶರ್ಮಾ ಕತ್ತರಿ ಹಿಡಿದು ಕೊಹ್ಲಿ ಕೂದಲನ್ನು ಕತ್ತರಿಸುತ್ತಿದ್ದಾರೆ. ಕೊಹ್ಲಿ ಕೇಶವಿನ್ಯಾಸದಲ್ಲಿ ಸ್ವಲ್ಪ ಬದಲಾವಣೆ ಮಾಡಲು ಅನುಷ್ಕಾ ಯತ್ನಿಸಿದ್ದಾರೆ.
42 ಸೆಕೆಂಡ್ ಗಳ ಈ ವಿಡಿಯೋದಲ್ಲಿ ಅನುಷ್ಕಾ ತಮ್ಮ ಹೇರ್ ಸ್ಟೈಲ್ ಕೂಡ ತೋರಿಸುತ್ತಾರೆ. ನನ್ನ ಪತ್ನಿ ಕೈನಲ್ಲಿ ಉತ್ತಮ ಹೇರ್ ಸ್ಟೈಲ್ ಎಂದು ಕೊಹ್ಲಿ ಹೇಳ್ತಿರುವುದನ್ನು ವಿಡಿಯೋದಲ್ಲಿ ಕೇಳಬಹುದು.