ಮುಂಬೈ, ಮಾ.26 (Daijiworld News/MB) : ಕೊರೊನಾ ವೈರಸ್ ಭೀತಿ ಎಲ್ಲೆಡೆ ಹರಡಿರುವ ನಡುವೆಯೇ ತಮ್ಮ ವರ್ಕೌಟ್ ವೀಡಿಯೋಗಳನ್ನು ಹಾಕುತ್ತಿರುವ ಬಾಲಿವುಡ್ ಸೆಲೆಬ್ರಿಟಿಗಳ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿರುವ ಬಾಲಿವುಡ್ನ ಫರ್ಹಾ ಖಾನ್ ಸೆಲೆಬ್ರಿಟಿಗಳ ಚಳಿ ಬಿಡಿಸಿದ್ದಾರೆ.
ಇಡೀ ದೇಶವು 21 ದಿನಗಳ ಲಾಕ್ಡೌನ್ನಲ್ಲಿರುವುದರಿಂದ, ಕತ್ರಿನಾ ಕೈಫ್, ಅನಿಲ್ ಕಪೂರ್, ರಕುಲ್ ಪ್ರೀತ್ ಸಿಂಗ್ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ತಮ್ಮ ಮನೆಗಳಿಂದ ವರ್ಕೌಟ್ ಮಾಡುತ್ತಿದ್ದು ಅದರ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
ಈ ಕುರಿತು ಆಕ್ಷೇಪ ವ್ಯಕ್ತಪಡಿಸಿ ಟ್ವೀಟ್ ಹಾಗೂ ಇನ್ಸ್ಟಾಗ್ರಾಂ ಮೂಲಕ ವಿಡಿಯೋ ಹರಿ ಬಿಟ್ಟಿರುವ ಫರ್ಹಾ ಖಾನ್ ಈ ವಿಡಿಯೋವನ್ನು ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತೆಯ ಆಸಕ್ತಿಗಾಗಿ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.
ದಯವಿಟ್ಟು ಎಲ್ಲಾ 'ಸೆಲೆಬ್ರಿಟಿಗಳಲ್ಲಿ ನನ್ನ ವಿನಮ್ರ ವಿನಂತಿ, ವರ್ಕೌಟ್ ವೀಡಿಯೋಗಳನ್ನು ಹಾಕಿ ಕೊಲ್ಲಬೇಡಿ. ನೀಔಉ ಸವಾಲು ಎದುರಿಸುತ್ತಿದ್ದೀರಿ ಎಂದು ನಾನು ಅರ್ಥೈಸಿಕೊಳ್ಳುತ್ತೇನೆ. ನಿಮಗೆ ನಿಮ್ಮ ದೇಹದ ಫಿಟ್ನೆಟ್ ಹೊರತು ಪಡಿಸಿ ಬೇರೆ ಯಾವ ಜಾಗತಿಕ ಎಂದು ಹೇಳಿದ್ದಾರೆ. ಸಾಂಕ್ರಾಮಿಕ ರೋಗದ ಬಗ್ಗೆ ಚಿಂತೆ ಇಲ್ಲ. ಆದರೆ ನಮ್ಮಲ್ಲಿ ಕೆಲವರಿಗೆ ಮಾತ್ರ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಚ್ಚಿನ ಕಾಳಜಿ ಇದೆ ಎಂದಿದ್ದಾರೆ.
ಹಾಗೆಯೇ ಈ ಸೆಲೆಬ್ರೆಟಿಗಳು ಈ ರೀತಿ ಮಾಡುವುದನ್ನು ನಿಲ್ಲಿಸದಿದ್ದಲ್ಲಿ ಅವರನ್ನು ಅನ್ಫಾಲೋ ಮಾಡುವುದಾಗಿ ಹೇಳಿದ್ದಾರೆ.
ಆದ್ದರಿಂದ ದಯವಿಟ್ಟು ನಮ್ಮ ಮೇಲೆ ಕರುಣೆ ತೋರಿಸಿ ಹಾಗೂ ನಿಮ್ಮ ವರ್ಕೌಟ್ ವೀಡಿಯೊಗಳನ್ನು ಅಪ್ಲೋಡ್ ಮಾಡುವುದನ್ನು ನಿಲ್ಲಿಸಿ, ಹಾಗಯೇ ನಂತರ ನಾನು ನಿಮ್ಮನ್ನು ಅನ್ಫಾಲೋ ಮಾಡಿದರೆ ಬೇಸರ ಪಡಬೇಡಿ ಎಂದು ಹೇಳಿದ್ದಾರೆ.
ಭಾರತದಲ್ಲಿ ಕೊರೊನಾ ಪ್ರಕರಣ ೬೦೦ ರ ಗಡಿ ದಾಟಿದ್ದು ಮೃತರ ಸಂಖ್ಯೆ 13 ಕ್ಕೆ ಏರಿದೆ.