ಬೆಂಗಳೂರು, ಮಾ.20 (DaijiworldNews/PY) : ಕೊರೊನಾ ಭೀತಿ ಹಿನ್ನೆಲೆ ಬಹುತೇಕ ಜನರು ವರ್ಕ್ ಫ್ರಂ ಹೋಮ್ನತ್ತ ಸಾಗಿದ್ದು, ನಿರ್ದೇಶಕ ರಿಷಬ್ ಶೆಟ್ಟಿ ಅವರ ಮನೆಯಲ್ಲೂ ಕೂಡಾ ವರ್ಕ್ ಫ್ರಂ ಹೋಮ್ ಜೋರಾಗಿದ್ದು, ಶೆಟ್ರು ಮಹನೊಂದಿಗೆ ಸಮಯ ಕಳೆಯೋದರಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.
ರಿಷಬ್ ಶೆಟ್ಟಿ ಅವರು ಹೆಚ್ಚಾಗಿ ಸಿನಿಮಾ ಕೆಲಸದಲ್ಲಿ ಮಗ್ನರಾಗಿರುತ್ತಿದ್ದರು. ಸದ್ಯ ಶೆಟ್ರು ಈಗ ಕೊರೊನಾ ಭೀತಿಯಿಂದ ಸ್ವಲ್ಪ ವಿರಾಮ ದೊರೆತಂತಾಗಿದೆ. ಹಾಗಾಗಿ ಶೆಟ್ರು ತಮ್ಮ ಹುಟ್ಟೂರಿನಲ್ಲಿ ಕುಟುಂಬದೊಂದಿಗೆ ಸಂತೋಷದಿಂದ ಕಾಲ ಕಳೆಯುತ್ತಿದ್ದು, ಮಗನೊಂದಿಗಿನ ಪೋಟೋವೊಂದನ್ನು ರಿಷಬ್ ಅವರು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.
ಊರೂರೇ ಖಾಲಿಯಾಗಿದೆ, ಆಫೀಸ್ ಬೀಗ ಹಾಕಿದೆ, ಸಿನಿಮಾದಿಂದ ಚಿಕ್ಕ ಬ್ರೇಕ್ ಸಿಕ್ಕಿದೆ. ಎಲ್ಲಾ ಆತಂಕಗಳನ್ನ ಹಿಂದೆ ಬಿಟ್ಟು ಹುಟ್ಟೂರಲ್ಲಿ, ನಾನು ಬೆಳೆದಿದ್ ಮನೇಲಿ, ಮಗರಾಯನಿಗೆ ಮಜ್ಜನ ನೀಡೋ ನೆಮ್ಮದಿನೇ ಬೇರೆ. ಒಟ್ಟಾರೆ ಎಲ್ಲರ ತರ ನಮ್ದೂ `ವರ್ಕ್ ಫ್ರಂ ಹೋಂ’ ಜೋರಾಗ್ ನಡೀತಿದೆ ಎಂದು ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ಧಾರೆ.
ರಿಷಬ್ ಇದು ನಿನಗಾಗಿ, ನನ್ನ ಮುಗ್ಧತೆಯ ಅರಿವು ನನಗಿಲ್ಲ. ನನ್ನ ಹೆತ್ತವನೊಮ್ಮೆ ನೋಡು, ಅವನ ಮುಗ್ಧತೆಯಲ್ಲವೆ ನನಗೆಲ್ಲ ಎಂದು ಕವನ ಬರೆದು ರಿಷಬ್ ಹಾಗೂ ರಣ್ವಿತ್ನ ಮುದ್ದಾದ ಫೋಟೋವನ್ನು ರಕ್ಷಿತ್ ವರ್ಣಿಸಿದ್ದಾರೆ.
ಕೊರೊನಾ ಭೀತಿಯಿಂದ ಸಿನಿಮಾ ಕೆಲಸದಿಂದ ರೆಸ್ಟ್ ಪಡೆದಿರುವ ಶೆಟ್ರು ಮನೆಯಲ್ಲಿ ಕುಟುಂಬದ ಜೊತೆ ಸಂತೋಷವಾಗಿ ಕಾಲ ಕಳೆಯುತ್ತಿದ್ದಾರೆ. ಅಪ್ಪ, ಮಗನ ಈ ಕ್ಯೂಟ್ ಫೋಟೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಾ ಇದೆ.