ಮಂಗಳೂರು, ಮಾ.18 (Daijiworld News/MB) : ಡಾ| ಸುರೇಶ್ ಕೋಟ್ಯಾನ್ ಚಿತ್ರಾಪು ನಿರ್ದೇಶನದ ತುಳು ಸಿನಿಮಾ ಇಲ್ಲ್ ಒಕ್ಕೆಲ್ ಶೀಘ್ರದಲ್ಲೇ ತೆರೆಕಾಣಲು ಸಿದ್ಧವಾಗಿದೆ.
ಶ್ರೀ ಗಜನಿ ಲಾಂಛನದಲ್ಲಿ ತಯಾರಾದ ವಾಸುದೇವ ಎಸ್.ಚಿತ್ರಾಪು ಮತ್ತು ದಿವಾಕರ ಶೆಟ್ಟಿ ನಿರ್ಮಾಣ ಮಾಡಿರುವ ಈ ಸಿನಿಮಾವು ಸಂಪೂರ್ಣ ಹಾಸ್ಯದಿಂದ ಕೂಡಿದ್ದು, ಕಾಮಿಡಿಯ ಜೊತೆಗೆ ಒಂದಷ್ಟು ಭಯಾನಕತೆಯು ಇದೆ ಎಂದು ನಿರ್ದೇಶಕರು ಹೇಳಿದ್ದಾರೆ.
ಇದೊಂದು ಮನರಂಜನಾತ್ಮಕ ಸಿನಿಮಾ, ಮನೆಕಟ್ಟುವ ಅವಸರದ ಸನ್ನಿವೇಶಗಳ ಜೊತೆಗೆ ಆ ಸಂದರ್ಭದಲ್ಲಿ ನಡೆಯುವ ಅವಾಂತರಗಳ ಎಳೆಯನ್ನು ಸಿನಿಮಾವಾಗಿ ಕಟ್ಟಲಾಗಿದೆ. ಹಾಗೆಯೇ ಈ ಸಿನಿಮಾದಲ್ಲಿ ಹಾರರ್ ಕೂಡಾ ಇದ್ದು, ಹಾರರ್ನ್ನು ಜನರಿಗೆ ಹಾಸ್ಯಾತ್ಮಕವಾಗಿ ತೋರಿಸಲು ಪ್ರಯತ್ನಿಸಲಾಗಿದೆ. ಇದೊಂದು ಹೊಸ ರೀತಿಯ ಪ್ರಯೋಗ ಎಂಬುದು ನಿರ್ದೇಶಕರ ಮಾತು.
ಈ ಸಿನಿಮಾದಲ್ಲಿ ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು, ಅದ್ವಿತಿ ಶೆಟ್ಟಿ, ವಿಸ್ಮಯ ವಿನಾಯಕ್, ವಿ.ಜೆ. ವಿನೀತ್, ಚಂದ್ರಕಲಾ ಮೋಹನ್, ಸೀತಾರಾಮ್ ಕಟೀಲು, ಸುನಿಲ್ ನೆಲ್ಲಿಗುಡ್ಡೆ, ಉಮೇಶ್ ಮಿಜಾರ್ ಸೇರಿದಂತೆ ಹಲವು ಕಲಾವಿದರು ಇಲ್ಲ್ ಒಕ್ಕೆಲ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.