ಉಡುಪಿ, ಮಾ.15 (Daijiworld News/MB) : ಅಮ್ಮ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾಗುತ್ತಿರುವ ತುಳು ಸಿನಿಮಾ ರಾಕೆಟ್ನ ಮುಹೂರ್ತ ಕಾರ್ಯಕ್ರಮ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶುಕ್ರವಾರ ನಡೆಯಿತು.
ಕಟೀಲು ಅನುವಂಶೀಯ ಅರ್ಚಕರಾದ ಆನಂದ ಅಸ್ರಣ್ಣರು ಹಾಗೂ ಶ್ರೀ ಹರಿ ಅಸ್ರಣ್ಣರು ಕ್ಯಾಮರಕ್ಕೆ ಪೂಜೆ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು.
ಈ ಸಿನಿಮಾವನ್ನು ದಿನಕರ್ ಜಿ ಅವರು ನಿರ್ದೇಶನ ಮಾಡಲಿದ್ದು ಅವರೇ ಸಿನಿಮಾದ ರಚನೆ ಮಾಡಿದ್ದಾರೆ. ಉದ್ಯಮಿಗಳಾದ ಸರಳ ಎನ್ ಕರ್ಕೇರ, ಜಯ ಶೆಟ್ಟಿ ಮತ್ತು ಜಯವರ್ಧನ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.
’ಪಿಲಿಬೈಲ್ ಯಮುನಕ್ಕ’ ಖ್ಯಾತಿಯ ಕಿಶೋರ್ ಕುಮಾರ್ ಶೆಟ್ಟಿ ಸಂಗೀತ ನಿರ್ದೇಶನ ಮಾಡಲಿದ್ದು ಗಿರಿಗಿಟ್ ಖ್ಯಾತಿಯ ನಿರಂಜನ್ ದಾಸ್ ಛಾಯಾಗ್ರಹಣವನ್ನು ಮಾಡಲಿದ್ದಾರೆ.
ಚಿತ್ರೀಕರಣದಲ್ಲಿ ನಿರ್ಮಾಣ, ನಿರ್ವಾಹಣೆ ಸತೀಶ್ ಬ್ರಹ್ಮಾವರ್ ಹಾಗೂ ಮೇಲ್ವಿಚಾರಣೆಯನ್ನು ಶ್ರೀ ಜೆ ಬಂಗೇರ ನಿರ್ವಸುತ್ತಿದ್ದಾರೆ.
ಮುಖ್ಯ ಭೂಮಿಕೆಯಲ್ಲಿ ಖ್ಯಾತ ನಟ ಪೃಥ್ವಿ ಅಂಬರ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಉಷಾ ಭಂಡಾರಿ, ಉಮೇಶ್ ಮಿಜಾರ್, ವಿನೀತ್ ಕುಮಾರ್, ಲಕ್ಷ ಶೆಟ್ಟಿ, ಅಂಕಿತ ಪಟ್ಲ ಕಾಣಿಸಿಕೊಳ್ಳಲಿದ್ದಾರೆ.
ಈ ಸಿನಿಮಾದ ಚಿತ್ರೀಕರಣವನ್ನು ಕಾರ್ಕಳದ ಸುತ್ತಮುತ್ತಲಿನ ಪ್ರದೇಶದಲ್ಲಿ ಮಾಡಲಾಗುವುದು ಎಂದು ನಿರ್ದೇಶಕರು ತಿಳಿಸಿದ್ದಾರೆ.