ಮಂಗಳೂರು, ಮಾ. 12 (Daijiworld News/MB) : ಅತ್ಯುತ್ತಮ ಏಷಿಯನ್ ಚಲನಚಿತ್ರ ಪ್ರಶಸ್ತಿ ಪಡೆದ ತುಳುವಿನ ಪಿಂಗಾರ ಸಿನಿಮಾ ತೆರೆ ಕಾಣಲು ಸಿದ್ಧವಾಗಿದೆ.
1960 ರಿಂದ 2019 ರವರೆಗೆ ತುಳುನಾಡಿನಲ್ಲಾಗಿರುವ ಬದಲಾವಣೆಯ ಚಿತ್ರಣವನ್ನು ನೀಡುವ ಈ ಸಿನಿಮಾ ಬಿಡುಗಡೆಗೂ ಮುನ್ನವೇ ಪ್ರಶಸ್ತಿಯನ್ನು ಪಡೆದು ಸದ್ದು ಮಾಡಿದೆ.
ಬೀಡಿ ಉದ್ಯಮ, ಉಳುವವನೇ ಹೊಳದೊಡೆಯ ಮುಂತಾದವು ತುಳುನಾಡಿನ ಮೇಲೆ ಬೀರಿದ ಪ್ರಭಾವ ಹಾಗೂ ದೈವದ ಕಾರಣಿಕ ಕುರಿತಾಗಿ ಈ ಸಿನಿಮಾ ಚರ್ಚೆ ನಡೆಸಲು ಮುಂದಾಗಿದೆ.
ಗುರುಪುರದ ಉತ್ಸಾಹಿ ಯುವಕ ಆರ್. ಪ್ರೀತಮ್ ಶೆಟ್ಟಿ ನಿರ್ದೇಶಿಸಿ, ಕಥೆ, ಚಿತ್ರಕಥೆ ಬರೆದಿರುವ ಈ ಸಿನಿಮಾಕ್ಕೆ ಶಶಿರಾಜ್ ಕಾವೂರು ಸಂಭಾಷಣೆ ನೀಡಿದ್ದಾರೆ. ಮೈಮ್ ರಾಮದಾಸ್ ಶೀನಾ ನಾಡೋಲಿ ಸಾಹಿತ್ಯ ಬರೆದಿದ್ದಾರೆ.
ಅವಿನಾಶ್ ಯು ಶೆಟ್ಟಿ ಹಾಗೂ ಡಿ.ಎನ್.ಮಂಜುನಾಥ ರೆಡ್ಡಿ ಈ ಸಿನಿಮಾದ ನಿರ್ಮಾಣದ ಹೊಣೆ ಹೊತ್ತಿದ್ದಾರೆ.
ಈ ಸಿನಿಮಾದಲ್ಲಿ ಮಧುಮತಿ ಎನ್.ಕೆ., ನೀಮಾ ರೆ, ಶಶಿರಾಜ್ ಕಾವೂರು, ಪಾರ್ಥ, ಜನಾರ್ಧನ್ ಕುಕ್ಕೆ, ರಂಜನ್ ಸುವರ್ಣ, ಸೂರಜ್ ಶೆಟ್ಟಿ, ಗಣೇಶ್ ಹೆಚ್.ಸಿ., ಸಿಂಚನ ಚಂದ್ರಮೋಹನ್, ಧನು. ಡಿ., ಸುಬ್ರಹ್ಮಣ್ಯ, ಮಂಜುನಾಥ್ ತುಮಕೂರು, ವಿಲಿಯಮ್, ಮೋಹನ್ ಮೊದಲಾದವರು ಪಾತ್ರಕ್ಕೆ ಜೀವ ತುಂಬಿದ್ದಾರೆ.
ವಿ. ಪವನ್ ಕುಮಾರ್ ಛಾಯಾಗ್ರಹಣ ಮಾಡಿದ್ದು, ಗಣೇಶ್ ನೀರ್ಚಾಲ್, ಶೇಷಾಚಲ್ ಕುಲಕರ್ಣಿ ಸಂಕಲನ ಮಾಡಿದ್ದಾರೆ.