'ತುಳು ಚಿತ್ರದಲ್ಲಿ ನಟಿಸಲು ಇಚ್ಛಿಸುತ್ತೇನೆ' - ಬಾಲಿವುಡ್ ನಟ, ನೃತ್ಯ ಸಂಯೋಜಕ ಸುಶಾಂತ್ ಪೂಜಾರಿ
Tue, Mar 10 2020 04:58:23 PM
ಮಂಗಳೂರು, ಮಾ. 10 (Daijiworld News/MB) : ಬಾಲಿವುಡ್ ನಟ, ನೃತ್ಯ ಸಂಯೋಜಕ ಸುಶಾಂತ್ ಪೂಜಾರಿ ಹುಟ್ಟಿ ಬೆಳೆದದ್ದು ಮುಂಬೈನಲ್ಲಾದರೂ ಅವರು ಕುಟುಂಬ ಮೂಲತಃ ಉಡುಪಿ ಜಿಲ್ಲೆಯವರು. "ಏಕ್ ಖಿಲಾಡಿ ಏಕ್ ಹಸೀನಾ" ಸಿನಿಮಾದಲ್ಲಿ ಹಿನ್ನೆಲೆ ನರ್ತಕರಾಗಿ ಅವರು ತಮ್ಮ ಬಾಲಿವುಡ್ ವೃತ್ತಿ ಜೀವನವು 2005 ರಲ್ಲಿ ಪ್ರಾರಂಭಿಸಿದ್ದಾರೆ. ಅವರಿಗೆ ಮೊದಲು ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ನೀಡಿದವರು ರೆಮೋ ಡಿಸೋಜಾ ಅವರಾಗಿದ್ದು ಸುಶಾಂತ್ ಎಬಿಸಿಡಿ ಸಿನಿಮಾದ ಮೂಲಕ ತನ್ನ ನಟನಾ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರು ಪ್ರಪಂಚದಾದ್ಯಂತದ ಬಾಲಿವುಡ್ ಸಂಸ್ಕೃತಿಯ ಇತಿಹಾಸ ಮತ್ತು ಶ್ರೀಮಂತಿಕೆಯನ್ನು ಪ್ರದರ್ಶಿಸುವ ಮರ್ಚೆಂಟ್ಸ್ ಆಫ್ ಬಾಲಿವುಡ್' ಸಂಗೀತದ ಮುಖ್ಯ ರೂವಾರಿ. ಬಾಲಿವುಡ್ನ ಅನೇಕ ಚಲನಚಿತ್ರಗಳಿಗೆ ಸುಶಾಂತ್ ಪೂಜಾರಿ ಸಹಾಯ ಮತ್ತು ನೃತ್ಯ ಸಂಯೋಜನೆ ಮಾಡಿದ್ದಾರೆ.
ದಾಯ್ಜಿವರ್ಲ್ಡ್ ಜೊತೆ ಮಾತನಾಡಿದ ಸುಶಾಂತ್ ಅವರು ತನ್ನ ಹೋರಾಟ, ಕಠಿಣ ಪರಿಶ್ರಮ ಮತ್ತು ಅದೃಷ್ಟದ ಬಗ್ಗೆ ಹೇಳಿದ್ದಾರೆ.
"ದೇವರಿಲ್ಲದೆ ನಾವು ನಮ್ಮ ಗುರಿ ತಲುಪಲು ಸಾಧ್ಯವಿಲ್ಲ. ಪ್ರಸ್ತುತ ಸ್ಪರ್ಧಾತ್ಮಕವಾಗಿರುವ ಇಂಡಸ್ಟ್ರೀಯಲ್ಲಿಯಂತೂ ಅದು ಸುಲಭವಲ್ಲ. ನನಗೆ ಆದರ್ಶ ವ್ಯಕ್ತಿ ರೆಮೋ ಡಿಸೋಜಾ ಅವರು. ಯಾಕೆಂದರೆ ನೃತ್ಯ ಮತ್ತು ನೃತ್ಯ ಸಂಯೋಜನೆಯ ವಿಷಯದಲ್ಲಿ ಅವರಿಗಿರುವ ತಾಳ್ಮೆ ಮತ್ತು ಅವರು ನೀಡುವ ಬೆಂಬಲ ಅದ್ಭುತವಾದದ್ದು. ನಾನು ಎಂದಿಗೂ ಅವರು ಕೂಗಾಡುವುದು, ನಿಂದಿಸುವುದು ಅಥವಾ ಅಸಭ್ಯವಾಗಿ ವರ್ತಿಸುವುದನ್ನು ನೋಡಿಲ್ಲ. ಅವರನ್ನು ನಾನು ಬಹಳ ಗೌರವಿಸುತ್ತೇನೆ" ಎಂದು ಹೇಳಿದ್ದಾರೆ.
ನಾನು ಕೂಡಾ "ಸ್ಟ್ರೀಟ್ ಡ್ಯಾನ್ಸರ್" ನ ಭಾಗವಾದ ಬಳಿಕ ನಾನು ಸ್ಟ್ರೀಟ್ ಡ್ಯಾನ್ಸರ್ ಆಗಿ ನನ್ನ ವೃತ್ತಿಜೀವನವನ್ನು ಹೇಗೆ ಪ್ರಾರಂಭಿಸಿದೆ ಎಂಬ ನೆನಪುಗಳು ಬಂದವು. ನಾನು ಬೀದಿಗಳಲ್ಲಿ ನೃತ್ಯ ಮಾಡುತ್ತಿದ್ದೆ. ಕ್ರಮೇಣ ನಾನು ಹಿನ್ನೆಲೆ ನರ್ತಕನಾಗಿ ಕಾರ್ಯ ನಿರ್ವಹಿಸಲು ಆರಂಭಿಸಿದೆ. ಅದೆಲ್ಲದರ ಬಳಿಕ ನಾನು ಈಗ ಈ ಮಟ್ಟಕ್ಕೆ ತಲುಪಿದ್ದೇನೆ" ಎಂದು ತಿಳಿಸಿದರು.
ಸುಶಾಂತ್ ವರುಣ್ ಧವನ್, ಶ್ರದ್ಧಾ ಕಪೂರ್ ಮತ್ತು ನೋರಾ ಫತೇಹಿ ಅವರೊಂದಿಗೆ 'ಸ್ಟ್ರೀಟ್ ಡ್ಯಾನ್ಸ್’ ಚಿತ್ರದಲ್ಲಿ ನಟಿಸಿದ್ದಾರೆ.
ಬಾಲಿವುಡ್ನ ಖ್ಯಾತ ಹಾಡುಗಳಾದಂತಹ "ಡಿಸ್ಕೋ ದಿವಾನೆ" ಯಂತಹ ಹಾಡುಗಳ ಸಹಾಯಕ ನೃತ್ಯ ಸಂಯೋಜಕರಾಗಿ ಅವರು ಕಾರ್ಯ ನಿರ್ವಹಿಸಿದ್ದಾರೆ. ಹಾಗೆಯೇ ವರುಣ್ ಧವನ್ ಮತ್ತು ಅರ್ಜುನ್ ರಾಂಪಾಲ್ ಅವರಿಗೆ ಇತರ ಕಾರ್ಯಕ್ರಮಗಳ ಸಂದರ್ಭದಲ್ಲಿ ನೃತ್ಯ ಸಂಯೋಜನೆ ಮಾಡಿದ್ದಾರೆ.
ಅವರು ಥಂಗ್ ಆಫ್ ಹಿಂದೂಸ್ತಾನ್ ಸಿನಿಮಾದಲ್ಲಿ ಪ್ರಭು ದೇವ್ ಅವರೊಂದಿಗೆ ಕಾರ್ಯ ನಿರ್ವಹಿಸಿದ್ದಾರೆ. ಅಮಿತಾಬ್ ಬಚ್ಚನ್ ಹಾಗೂ ಅಮಿರ್ ಖಾನ್ ಅವರಿಗೂ ನೃತ್ಯ ಕಲಿಸಿರುವ ಅವರು ಹೃತಿಕ್ ರೋಷನ್ ಅವರೊಂದಿಗೆ "ಕ್ರಿಶ್ 3" ರಲ್ಲಿ "ರಘುಪತಿ ರಾಘವ್" ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ಸುಶಾಂತ್ ಅವರು ಬಾಲಿವುಡ್ನ ರೆಮೋ ಡಿಸೋಜಾ, ಪ್ರಭುದೇವ, ಟೈಗರ್ ಶ್ರಾಫ್, ಹೃತಿಕ್ ರೋಷನ್, ವರುಣ್ ಧವನ್, ಶಾರದಾ ಕಪೂರ್ ಅವರೊಂದಿಗೆ ಕಾರ್ಯ ನಿರ್ವಹಿಸಿದ್ದಾರೆ.
ಅವರು ಎಬಿಸಿಡಿ (ಎನಿ ಬಾಡಿ ಕ್ಯಾನ್ ಡ್ಯಾನ್ಸ್), ಎಬಿಸಿಡಿ 2 ಸೆಕೆಂಡ್ ಲೀಡ್, ಎ ಫ್ಲೈಯಿಂಗ್ ಜಾಟ್, ಸ್ಟ್ರೀಟ್ ಡ್ಯಾನ್ಸರ್ 3 ಡಿ ಹಾಗೂ ಏಕ್ ಫಿಲ್ಟರ್ ಕಾಫಿ (ಕಿರುಚಿತ್ರ) ಚಿತ್ರಗಳಲ್ಲಿ ನಟಿಸಿದ್ದಾರೆ.
ತುಳುನಾಡಿನ ಕುರಿತಾಗಿ ಮಾತನಾಡಿದ ಅವರು, "ತುಳು ನಾಡಿನ ಮೇಲಿನ ಗೌರವ, ಪ್ರೀತಿ ಹಾಗೂ ಭಾಷೆ ಅದ್ಭುತವಾದದ್ದು. ನಾನು ಎಂದಿಗೂ ನನ್ನ ಊರು ಹಾಗೂ ಮಾತೃಭಾಷೆಯನ್ನು ಮರೆತಿಲ್ಲ. ನಾನು ಕರಾವಳಿಯ ಪ್ರಶಾಂತವಾದ ಕಡಲ ತೀರಗಳಲ್ಲಿ ನಡೆಯಲು ಆನಂದಿಸುತ್ತೇನೆ. ಹಾಗೂ ಮಂಗಳೂರಿನ ಭೋಜನ ಸವಿಯಲು ಇಷ್ಟಪಡುತ್ತೇನೆ. ತುಳು ಸಿನಿಮಾ ರಂಗದಲ್ಲಿ ಯಾವುದೇ ಅವಕಾಶಗಳು ದೊರೆತಲ್ಲಿ ನಾನು ತುಳು ಸಿನಿಮಾ ರಂಗದ ಭಾಗವಾಗಲು ಇಚ್ಛಿಸುತ್ತೇನೆ" ಎಂದು ತಿಳಿಸಿದ್ದಾರೆ.