ಉಡುಪಿ, ಮಾ. 02 (Daijiworld News/MB) : ಕನ್ನಡ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ "ಕಾಮಿಡಿ ಕಿಲಾಡಿಗಳು ಸೀಸನ್ 3" ರಿಯಾಲಿಟಿ ಶೋನ ಟ್ರೋಫಿಯನ್ನು ಶನಿವಾರ ಅದ್ಧೂರಿ ತೆರೆಬಿದ್ದಿದ್ದು, ಉಡುಪಿಯ ರಾಕೇಶ್ ಪೂಜಾರಿ ತಮ್ಮದಾಗಿಸಿಕೊಂಡಿದ್ದಾರೆ.
ದಿನಕರ್ ಪೂಜಾರಿ ಹಾಗೂ ಶಾಂಭವಿಯವರ ಪುತ್ರರಾಗಿರುವ ರಾಕೇಶ್ ಪೂಜಾರಿ ಉಡುಪಿಯ ನಿವಾಸಿ. ರಾಕೇಶ್ ಅವರು ಕೆಮ್ಮಣ್ಣುವಿನ ಕಾರ್ಮೆಲ್ ಪ್ರೌಡ ಶಾಲೆ ಹಾಗೂ ಕಲ್ಯಾಣ್ಪುರದ ಮಿಲಾಗ್ರಿಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ.
ರಾಕೇಶ್ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ತುಳುಶೋ ಕಡ್ಲೆ ಬಜಿಲ್ ನಲ್ಲಿ ಪಾತ್ರ ನಿರ್ವಹಿಸುತ್ತಿದ್ದರು. ಹಾಗೆಯೇ ಅವರು ನಾಟಕಗಳಲ್ಲಿ ನಟಿಸಿದ್ದು ಪೈಲ್ವಾನ್, ಇದು ಎಂತ ಲೋಕವಯ್ಯ ಕನ್ನ ಸಿನಿಮಾ, ಪೆಟ್ಟ್ಕಮ್ಮಿ, ಅಮ್ಮೆರ್ ಪೊಲೀಸ್, ಪಮ್ಮಣ್ಣೆ ದಿ ಗ್ರೇಟ್, ಉಮಿಲ್, ಇಲ್ಲೊಕ್ಕೆಲ್ ತುಳು ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ಹಾಗೆಯೇ ಬಲೆ ತೆಲಿಪಾಲೆ, ಮೇ 22, ಸ್ಟಾರ್, ತೂಯಿನಾಯೆ ಪೋಯೆ ಮೊದಲಾದ ತುಳು ರಿಯಾಲಿಟಿ ಶೋ ಗಳಲ್ಲಿಯೂ ಪಾತ್ರ ವಹಿಸಿದ್ದಾರೆ.
ಹಾಸನದ ಸಂತೋಷ್ ಅವರು ರನ್ನರ್ ಅಪ್ ಆಗಿದ್ದು ನಾಲ್ಕು ಲಕ್ಷ ನಗದು ಹಾಗೂ ಟ್ರೋಫಿ ವಿಜೇತರಾಗಿದ್ದಾರೆ. ಶನಿವಾರ ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ
ಕಾಮಿಡಿ ಕಿಲಾಡಿಗಳು ಸೀಸನ್ 3’ ಗ್ರ್ಯಾಂಡ್ ಫಿನಾಲೆ ಅದ್ಧೂರಿಯಾಗಿ ನಡೆದಿದ್ದು, ಶೋ ತೀರ್ಪುಗಾರರಾಗಿದ್ದ ನಟ ಜಗ್ಗೇಶ್ ಅವರು ಕಾಮಿಡಿ ಕಿಲಾಡಿಗಳು ಸೀಸನ್ 3ರ ವಿನ್ನರ್ ಮತ್ತು ರನ್ನರ್ ಅಪ್ಗಳನ್ನು ಘೋಷಿಸಿದರು.
ಕೋಳಿ ಕಳ್ಳ ಖ್ಯಾತಿಯ ಮನೋಹರ್ ಹಾಗೂ ಬಾ ಮಲಿಕೋ ಖ್ಯಾತಿಯ ದಾನಪ್ಪ ಅವರು ಎರಡನೇ ರನ್ನರ್ ಅಪ್ ಸ್ಥಾನವನ್ನು ಹಂಚಿಕೊಂಡಿದ್ದು ಅವರಿಬ್ಬರಿಗೂ ಒಂದು ಲಕ್ಷ ದೊರೆತಿದೆ.
ವಿನ್ನರ್ ರಾಕೇಶ್ ಅವರಿಗೆ ಕಾರ್ಯಕ್ರಮದ ಮೂವರು ತಿರ್ಪುಗಾರರಾದ ನಟ ಜಗ್ಗೇಶ್, ನಟಿ ರಕ್ಷಿತಾ, ನಿರ್ದೇಶಕ ಯೋಗರಾಜ್ ಭಟ್ ಹಾಗೂ ಖಾಸಗಿ ವಾಹಿನಿಯ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರ್ ಅವರು ನಗದು ಬಹುಮಾನದ ಚೆಕ್ ಮತ್ತು ಟ್ರೋಫಿ ನೀಡಿ ಖುಷಿಪಟ್ಟರು.
15 ಸ್ಪರ್ಧಿಗಳು ತೀವ್ರ ಪೈಪೋಟಿ ನೀಡುತ್ತಾ, 26 ವಾರಗಳ ಕಾಲ ನಡೆದ "ಕಾಮಿಡಿ ಕಿಲಾಡಿಗಳು ಸೀಸನ್ 3" ಗೆ ಅದ್ಧೂರಿ ತೆರೆಬಿದ್ದಿದೆ. ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಮಂದಿ ಪ್ರೇಕ್ಷಕರು ನೆರೆದಿದ್ದರು.