ಬೆಂಗಳೂರು, ಮಾ.01 (DaijiworldNews/PY) : ಗೀತ ಗೋವಿಂದಂ ಸಿನಿಮಾ ಹಿಟ್ ಆದ ಬಳಿಕ ನಿದೇಶಕ ಪರಶುರಾಮ್ ಹೊಸ ಸಿನಿಮಾ ಮಾಡಲು ಮುಂದಾಗಿದ್ದಾರೆ. ಇದೀಗ ನಾಗಚೈತನ್ಯ ಜೊತೆ ಸಿನಿಮಾ ಮಾಡುತ್ತಿದ್ದು, ಈ ಸಿನಿಮಾ ಕಾಮಿಡಿ ಹಾಗೂ ಮನರಂಜನಾಧಾರಿತ ಚಿತ್ರವಾಗಿದೆ. ಈ ಹೊಸ ಚಿತ್ರಕ್ಕೆ ನಾಯಕಿಯ ಆಯ್ಕೆಯ ವಿಚಾರವಾಗಿ ತೀವ್ರವಾದ ಕುತೂಹಲ ಮೂಡಿಸಿದ್ದು, ನಟಿ ರಶ್ಮಿಕಾ ಮಂದಣ್ಣ ಹಾಗೂ ಪೂಜಾ ನಡುವೆ ಭಾರಿ ಸ್ಪರ್ಧೆ ಏರ್ಪಟ್ಟಿದೆ.
ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಆದರೆ, ನಿರ್ದೇಶಕ ಪರಶುರಾಮ್ ಅವರು ಚಿತ್ರಕ್ಕೆ ನಾಯಕಿ ನಟಿಯರ ಕುರಿತುಹಲವು ದಿನಗಳಿಂದ ತಲೆ ಕೆಡಿಸಿಕೊಂಡಿದ್ದು, ಈ ಇಬ್ಬರು ನಟಿಯರಲ್ಲಿ ಯಾರನ್ನು ಆಯ್ಕೆ ಮಾಡುವುದು ಎಂಬ ಗೊಂದಲದಲ್ಲಿ ಸಿಲುಕಿದ್ದಾರೆ. ಈ ಹಿಂದೆ ಗೀತ ಗೋವಿದಂ ಸಿನಿಮಾದಲ್ಲಿ ರಶ್ಮಿಕಾ ಅವರ ನಟನೆ ನೋಡಿ ಇವರನ್ನೇ ಆಯ್ಕೆ ಮಾಡಬೇಕೆಂದು ನಿರ್ದೇಶಕರು ಅಂದುಕೊಂಡಿದ್ದರು. ಅಲ್ಲದೇ ರಶ್ಮಿಕಾ ಅಭಿನಯದ ಹಲವು ಚಿತ್ರಗಳು ಯಶಸ್ಸು ಕಂಡಿದ್ದ ಕಾರಣ ಕಿರಿಕ್ ಹುಡುಗಿಯನ್ನೇ ನಾಗಚೈತನ್ಯ ಅವರಿಗೆ ಜೋಡಿಯಾಗಿಸಲು ಮುಂದಾಗಿದ್ದರು.
ಒಂದು ಕಡೆ ನಿರ್ದೇಶಕರು ರಶ್ಮಿಕಾ ಅವರ ಆಯ್ಕೆ ಕಡೆ ಮನಸ್ಸು ಮಾಡಿದರೆ, ನಿರ್ಮಾಪಕರು ಪೂಜಾ ಹೆಗಡೆ ಅವರನ್ನು ಆಯ್ಕೆ ಮಾಡುವತ್ತ ಮನಸ್ಸು ಮಾಡಿದ್ದಾರಂತೆ. ಹೀಗಾಗಿ ನಾಯಕಿರ ಆಯ್ಕೆ ಮಾಡುವ ವಿಚಾರದಲ್ಲಿ ಒದ್ದಾಡುತ್ತಿದ್ದಾರೆ. ಅಲ್ಲದೇ ನಿರ್ಮಾಪಕರು ಈ ಹಿಂದಇನ ಚಿತ್ರದ ಸಂದರ್ಭ ಪೂಜಾ ಫ್ಯಾನ್ಸಿ ಅಡ್ವಾನ್ಸ್ ಪಡೆದಿದ್ದಾರಂತೆ. ಹಾಗಾಗಿ ಚಿತ್ರಕ್ಕೆ ನಾಯಕಿ ನಟಿಯಾಗಿ ಪೂಜಾ ಹೆಗಡೆಯನ್ನು ಆಯ್ಕೆ ಮಾಡುವತ್ತ ನಿರ್ಮಾಪಕರು ಮನಸ್ಸು ಮಾಡಿದ್ಧಾರೆ ಎನ್ನಲಾಗಿದೆ. ಈ ಚಿತ್ರವನ್ನು 14 ರೀಲ್ಸ್ ಪ್ರೊಡಕ್ಷನ್ಸ್ ಸಂಸ್ಥೆ ಚಿತ್ರ ನಿರ್ಮಿಸುತ್ತಿದೆ.
ನಾಗಚೈತನ್ಯ ಹಾಗೂ ಪೂಜಾ ಹೆಗಡೆ ಈ ಹಿಂದೆ ಒಕ ಲೈಲಾ ಕೋಸಂ ಚಿತ್ರದಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಆದರೆ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಅಷ್ಟೇನು ಸದ್ದು ಮಾಡಿರಲಿಲ್ಲ. ಪ್ರಸ್ತುತ ನಾಗಚೈತನ್ಯರ ತಮ್ಮ ಅಖಿಲ್ ಅವರ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಸಿನಿಮಾದಲ್ಲಿ ಪೂಜಾ ನಟಿಸುತ್ತಿದ್ದಾರೆ.
ನಾಗಚೈತನ್ಯ ಅವರ ಸಿನಿಮಾಗೂ ಪೂಜಾ ಹೆಗಡೆಯವರೇ ನಾಯಕಿಯಾಗಿ ಆಯ್ಕೆಯಾಗುವುದು ಬಹುತೇಕ ಖಚಿತ ಎನ್ನಲಾಗಿದೆ. ಹೀಗಾಗಿ ನಾಗಚೈತನ್ಯ ಜೊತೆ ರಶ್ಮಿಕಾ ರೊಮ್ಯಾನ್ಸ್ ಮಾಡುವ ಅವಕಾಶವನ್ನು ಕಳೆದುಕೊಳ್ಳಲಿದ್ದಾರೆ. ಈಗಾಗಲೇ ರಶ್ಮಿಕಾ ಅವರಿಗೆ ಹೆಚ್ಚು ಆಫರ್ಗಳು ಬರುತ್ತಿದ್ದು, ಭೀಷ್ಮ ಸಕ್ಸಸ್ ಬಳಿಕ ಹಲವು ನಿರ್ಮಾಪಕರು ಅವರನ್ನು ಸಂಪರ್ಕಿಸಿದ್ದಾರೆ.
ಪ್ರಸ್ತುತ ರಶ್ಮಿಕಾ ಮಂದಣ್ಣ ತಮಿಳು ನಟ ಕಾರ್ತಿಯವರ ಸುಲ್ತಾನ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದು ತೆಲುಗಿಗೂ ಡಬ್ ಆಗುತ್ತಿದೆ. ಅಲ್ಲದೆ ಬಹುದಿನಗಳ ಗ್ಯಾಪ್ ಬಳಿಕ ಇದೀಗ ಸ್ಯಾಂಡಲ್ವುಡ್ಗೆ ಎಂಟ್ರಿಯಾಗಿದ್ದು, ಪೊಗರು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.