ಮಂಗಳೂರು, ಫೆ 27 (Daijiworld News/MB) : ಜರ್ನಿ ಥೇಟರ್ ಗ್ರೂಪ್ ಮಂಗಳೂರು ಪ್ರಕಟನೆಯ ಚೊಚ್ಚಳ ಪುಸ್ತಕ ನಂದಳಿಕೆ ನಾರಾಯಣ ಶೆಟ್ಟಿಯವರ ರಂಗ ತುಪ್ಪೆ ನಾಲ್ಕು ತುಳು ನಾಟಕಗಳ ಸಂಚಯ ಬಿಡುಗಡೆ ಸಮಾರಂಭವು ಬುಧವಾರ ಸಂಜೆ ನಗರದ ಡಾನ್ ಬಾಸ್ಕೊ ಹಾಲ್ನಲ್ಲಿ ನಡೆಯಿತು.
ಈ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ದಯಾನಂದ ಕತ್ತಲ್ಸಾರ್ ವಹಿಸಿದ್ದು ಖ್ಯಾತ ನಾಟಕ ರಚನಕಾರರು ಹಾಗೂ ಚಲನಚಿತ್ರ ನಿರ್ದೇಶಕರು ವಿಜಯ್ ಕುಮಾರ್ ಕೊಡಿಯಾಲ್ಬೈಲ್ ಪುಸ್ತಕ ಬಿಡುಗಡೆ ಮಾಡಿದರು.
ಮುಖ್ಯ ಅತಿಥಿಗಳಾಗಿ ಕ್ಯಾಂಪ್ಕೋ ಮಂಗಳೂರಿನ ನಿರ್ದೇಶಕರು ಸತೀಶ್ಚಂದ್ರ ಭಂಡಾರಿ, ರಂಗ ಹಿತೈಷಿ ಹಾಗೂ ಹೊಟೇಲ್ ಸೂರಜ್ ಇಂಟರ್ನ್ಯಾಷನಲ್ನ ಮಾಲಕರಾದ ಟಿ. ರವೀಂದ್ರ ಪೂಜಾರಿ, ಉದ್ಯಮಿ ಲ| ಗಣೇಶ್ ಶೆಟ್ಟಿ ಆಗಮಿಸಿದ್ದು ವೇದಿಕೆಯಲ್ಲಿ ರಂಗತುಪ್ಪೆ ನಾಟಕ ಸಂಕಲನದ ರಚನಾಕಾರರು ನಂದಳಿಕೆ ನಾರಾಯಣ ಶೆಟ್ಟಿ, ರಂಗ ನಿರ್ದೇಶಕರು ಮನೋಹರ ಶೆಟ್ಟಿ ನಂದಳಿಕೆ, ಜರ್ನಿ ಥೇಟರ್ ಗ್ರೂಪ್ ಮಂಗಳೂರಿನ ಅಧ್ಯಕ್ಷರು ದೀಪಕ್ ಕಲಾಯಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರಂಗ ಮಿಲನ ಮುಂಬಯಿ ಅಭಿನಯದ ನಂದಳಿಕೆ ನಾರಾಯಣ ಶೆಟ್ಟಿ ರಚಿಸಿದ, ಮನೋಹರ ಶೆಟ್ಟಿ ನಂದಳಿಕೆ ನಿರ್ದೇಶನದ ಸಂಸಾರ ತುಳು ನಾಟಕವು ಪ್ರದರ್ಶಿಸಲಾಗಿದ್ದು ಪ್ರೇಕ್ಷಕರ ಗಮನ ಸೆಳೆದಿದೆ.
ಈ ನಾಟಕಕ್ಕೆ ದಿವಾಕರ್ ಕಟೀಲ್ ಸಂಗೀತ ನೀಡಿದ್ದು ಖ್ಯಾತ ನಾಟಕ ನಿರ್ದೇಶಕ ವಿದ್ದು ಉಚ್ಚಿಲ್ ಬೆಳಕು ಹಾಗೂ ರಂಗ ವಿನ್ಯಾಸದ ಕಾರ್ಯ ನಿರ್ವಹಿಸಿದ್ದಾರೆ.
ಮನೋಹರ್ ಶೆಟ್ಟಿ ನಂದಳಿಕೆ, ರೂಪಾ ವರ್ಕಾಡಿ, ಚಂದ್ರಕಾಂತ್ ಸಾಲ್ಯಾನ್, ಸುನೀಲ್ ಪಲ್ಲಮಜಲ್, ಮನೋಜ್ ವಾಮಂಜೂರು ಪಾತ್ರಕ್ಕೆ ಜೀವ ತುಂಬಿದರು.