ಮುಂಬೈ, ಫೆ 22 (Daijiworld News/MB) : ಮಂಗಳೂರಿನ ಬೆಡಗಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ತನ್ನ 44ನೇ ವಯಸ್ಸಿನಲ್ಲಿ ಬಾಡಿಗೆ ತಾಯಿಯ ಮೂಲಕ ಹೆಣ್ಣು ಮಗುವಿಗೆ ತಾಯಿ ಆಗಿದ್ದಾರೆ.
ಈ ಬಗ್ಗೆ ತನ್ನ ಇನ್ಸ್ಟಾಗ್ರಾಂ ಮೂಲಕ ತಿಳಿಸಿರುವ ಶಿಲ್ಪಾ, ತಮ್ಮ ಬೆರಳನ್ನು ಹಿಡಿದಿರುವ ಮಗಳ ಫೋಟೋವನ್ನು ಹಾಕಿ ಅದಕ್ಕೆ, "ಓಂ ಶ್ರೀ ಗಣೇಶಾಯ ನಮಃ., ನಮ್ಮ ಪ್ರಾರ್ಥನೆಗೆ ಪವಾಡದ ಮೂಲಕ ಉತ್ತರ ದೊರೆತಿದೆ. ನಮ್ಮ ಹೃದಯದಲ್ಲಿ ಕೃತಜ್ಞತೆಯೊಂದಿಗೆ ನಾವು ನಿಮಗೆ ನಮ್ಮ ಪುಟ್ಟ ದೇವತೆ ಶಮಿಶಾ ಶೆಟ್ಟಿಯನ್ನು ನಿಮಗೆ ಪರಿಚಯಿಸುತ್ತಿದ್ದೇನೆ. ಜೂ. ಶಿಲ್ಪಾ ಶೆಟ್ಟಿ ಕುಂದ್ರಾ ಫೆಬ್ರವರಿ 15ರಂದು ಜನಿಸಿದ್ದಾಳೆ. ಸ ಎಂದರೆ ಸಂಸ್ಕೃತದಲ್ಲಿ ಹೊಂದಲು ಹಾಗೂ ಮಿಶ್ರಾ ಎಂದರೆ ರಶ್ಯಾ ಬಾಷೆಯಲ್ಲಿ ದೇವರಂತೆ ಇರುವವರು ಎಂದು ಅರ್ಥ. ಹಾಗಾಗಿ ನಮ್ಮ ಮನೆಗೆ ಆಗಮಿಸಿರುವ ಲಕ್ಷ್ಮಿಗೆ ಸಮಿಶಾ ಎಂದು ಹೆಸರಿಟ್ಟಿದ್ದೇವೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದ ನಮ್ಮ ಮಕ್ಕಳ ಮೇಲಿರಲಿ ಎಂದು ಬರೆದಿದ್ದಾರೆ.
ಹಾಗೆಯೇ ಭಾವಪರವಶರಾದ ಪೋಷಕರು ರಾಜ್ ಹಾಗೂ ಶಿಲ್ಪಾ ಶೆಟ್ಟಿ, ಅತೀ ಉತ್ಸಾಹದಲ್ಲಿರುವ ಸಹೋದರ ವಿವಾನ್ ರಾಜ್ ಕುಂದ್ರಾ ಎಂದು ಬರೆದಿದ್ದಾರೆ.
ಈ ಹಿಂದೆ ಶಿಲ್ಪಾ, 37ನೇ ವರ್ಷದಲ್ಲಿ ನಾನು ತಾಯಿಯಾಗಬೇಕೆಂಬ ಇಚ್ಛೆ ನನ್ನದಾಗಿರಲಿಲ್ಲ. ಸೂಕ್ತ ಸಮಯದಲ್ಲಿ ಮಹಿಳೆ ತಾಯ್ತನದ ಅನುಭವ ಪಡೆಯಬೇಕು. ಆದರೆ ನನಗೆ ರಾಜ್ ಕುಂದ್ರಾ ಸರಿಯಾದ ಸಮಯದಲ್ಲಿ ಸಿಗದಿದ್ದಕ್ಕೆ 37ನೇ ವಯಸ್ಸಿನಲ್ಲಿ ತಾಯಿಯಾದೆ ಎಂದು ಹೇಳಿಕೊಂಡಿದ್ದರು.