ಮುಂಬೈ, ಫೆ 20 (Daijiworld News/MB) : ಟಾಪ್ಲೆಸ್ ಫೋಟೋಶೂಟ್ ಮಾಡಿಸಿದ ಹುಡುಗಿಗೆ ನಟ್ಟಿಗರು ಸೀರೆ ಉಡಿಸಿದ್ದಾರೆ. ಹಾಗೆಯೇ ಈ ಫೋಟೋ ಕ್ಲಿಕಿಸಿದ ಖ್ಯಾತ ಪ್ಯಾಶನ್ ಫೋಟೋಗ್ರಾಫರ್ ಡಬ್ಬೂ ರತ್ನಾನಿಗೂ ಸೀರೆ ಉಡಿಸಿ ಟ್ರೋಲ್ ಮಾಡಿದ್ದಾರೆ.
ರತ್ನಾನಿ 2020ನೇ ಸಾಲಿನ ಗ್ಲ್ಯಾಮರ್ ಕ್ಯಾಲೆಂಡರ್ ಹೊರತರುತ್ತಿದ್ದು ಅದಕ್ಕಾಗಿ ಬಾಲಿವುಡ್ ನಟಿಯರ ಟಾಪ್ ಲೆಸ್ ಫೋಟೊಶೂಟ್ ಮಾಡುತ್ತಿದ್ದಾರೆ.
ಈಗಾಗಲೇ ಅವರು ಭೂಮಿ ಪಡ್ನೇಕರ್, ಕಿಯಾರ ಅಡ್ವಾಣಿ ಹಾಗೂ ಸನ್ನಿ ಲಿಯೋನ್ ಅವರ ಟಾಪ್ ಲೆಸ್ ಫೋಟೊಶೂಟ್ ಮಾಡಿದ್ದಾರೆ.
ಈ ನಟ್ಟಿಯರ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಕೆಲವರು ಈ ಪೋಟೋಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಕಿಯಾರ ಪೋಟೊಗೆ ಸೀರೆ ಉಡಿಸಿದ್ದಾರೆ.
ಕಿಯಾರ ಅಡ್ವಾಣಿ ಟಾಪ್ ಲೆಸ್ ಪೋಟೋಗೆ ಸೀರೆ ಉಡಿಸಿರುವ ನೆಟ್ಟಿಗರು ಈ ರೀತಿಯಾಗಿ ಫೋಟೋಶೂಟ್ ಮಾಡಿಸಬೇಕು ಎಂದು ಟೀಕೆ ಮಾಡಿದ್ದಾರೆ. ಹಾಗೆಯೇ ಸುಂದರವಾದ ಫೋಟೋ ಹಾಗೂ ಸುಂದರವಾದ ಫೋಟೋಶೂಟ್ ಎಂದರೆ ಈ ರೀತಿ ಇರುತ್ತದೆ ಎಂದಿದ್ದಾರೆ.