ಗುವಾಹತಿ, ಫೆ 16 (Daijiworld News/MB) : 65ನೇ ಅಮೆಝಾನ್ ಫಿಲಂಫೇರ್ ಪ್ರಶಸ್ತಿ ಪ್ರದಾನ ಸಮಾರಂಭ ಶನಿವಾರ ತಡರಾತ್ರಿ ಇದೇ ಮೊದಲ ಬಾರಿಗೆ ಅಸ್ಸಾಂ ರಾಜಧಾನಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಗಲ್ಲಿ ಬಾಯ್ ಚಿತ್ರ ಅತ್ಯುತ್ತಮ ಚಿತ್ರಪ್ರಶಸ್ತಿ ಪಡೆದರೆ, ರಣವೀರ್ ಸಿಂಗ್ ಹಾಗೂ ಆಲಿಯಾ ಭಟ್ ಅತ್ಯುತ್ತಮ ನಟ, ನಟಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಕರಣ್ ಜೋಹರ್, ವಿಕ್ಕಿ ಕೌಶನ್ ಮತ್ತು ವರುಣ್ ಧವನ್ ಸೇರಿದಂತೆ ಬಾಲಿವುಡ್ನ ಹಲವು ಮಂದಿ ಗಣ್ಯರು ಭಾಗವಹಿಸಿದ್ದು ಅಕ್ಷಯ್ ಕುಮಾರ್, ರಣವೀರ್ ಸಿಂಗ್, ಅಂಶುಮನ್ ಖುರಾನಾ ಹಾಗೂ ಕಾರ್ತಿಕ್ ಆರ್ಯನ್ ತಮ್ಮ ಕಾರ್ಯಕ್ರಮಗಳು ಮೂಲಕ ಜನರ ಗಮನ ಸೆಳೆದರು.
ಫಿಲಂಫೇರ್ ಅವಾರ್ಡ್ಸ್ ನಲ್ಲಿ ಗಲ್ಲಿ ಬಾಯ್ಗೆ ಉತ್ತಮ ಚಿತ್ರ, ಝೋನಾ ಅಖ್ತರ್ (ಗಲ್ಲಿ ಬಾಯ್) ಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ , ಆರ್ಟಿಕಲ್ 15 (ಅಭಿನವ್ ಸಿನ್ಹಾ), ಸೋನ್ಚಿರಿಯಾ (ಅಭಿಷೇಕ್ ಔಬೆ) ಉತ್ತಮ ಚಿತ್ರ (ಮಿಮರ್ಶಕ ಪ್ರಶಸ್ತಿ), ಉತ್ತಮ ಚೊಚ್ಚಳ ನಿರ್ದೇಶನ- ಆದಿತ್ಯಧರ್ (ಉರಿ - ದ ಸರ್ಜಿಕಲ್ ಸ್ಟ್ರೈಕ್) ದೊರೆತಿದೆ.
ಉತ್ತಮ ನಟ - ರಣವೀರ್ ಸಿಂಗ್ (ಗಲ್ಲಿ ಬಾಯ್), ಉತ್ತಮ ನಟ (ವಿಮರ್ಶಕರ ಆಯ್ಕೆ)- ಆಯುಶ್ಮಾನ್ ಖುರಾನಾ (ಆರ್ಟಿಕಲ್ 15), ಉತ್ತಮ ನಟಿ- ಆಲಿಯಾ ಭಟ್ (ಗಲ್ಲಿ ಬಾಯ್), ಉತ್ತಮ ನಟಿ (ವಿಮರ್ಶಕರ ಆಯ್ಕೆ) - ಭೂಮಿ ಪಾಂಡೇಖರ್ (ಸಾಂದ್ ಕ ಆಂಕ್) ತಾಪಸಿ (ಸಾಂದ್ ಕ ಆಂಕ್), ಉತ್ತಮ ಪೋಷಕ ನಟಿ - ಅಮೃತಾ ಸುಭಾಷ್ (ಗಲ್ಲಿ ಬಾಯ್), ಉತ್ತಮ ಪೋಷಕ ನಟ - ಸಿದ್ಧಾಂತ್ ಚತುರ್ವೇದಿ (ಗಲ್ಲಿ ಬಾಯ್), ಉತ್ತಮ ಚೊಚ್ಚಲ ನಟ- ಅಭಿಮನ್ಯು ದಸ್ಸಾನಿ (ಮದ್ ಕೋ ದರ್ದ್ ನಹಿ ಹೋತಾ), ಉತ್ತಮ ಚೊಚ್ಚಳ ನಟಿ- ಅನನ್ಯಾ ಪಾಂಡೆ (ಸ್ಟೂಡೆಂಟ್ ಆಫ್ ದ ಇಯರ್ 2) ಗೆ ಲಭಿಸಿದೆ.
ಉತ್ತಮ ಸಂಗೀತ ಆಲ್ಬಂ - ಗಲ್ಲಿ ಬಾಯ್ (ಝೋಯಾ ಸಖ್ತರ್, ಅಂಕುರ್ ತಿವಾರಿ, ಕಬೀರ್ ಸಿಂಗ್), ಉತ್ತಮ ಹಾಡು- ಡಿವೈನ್ ಆಂಡ್ ಅಂಕುರ್ ತಿವಾರಿ (ಅಪ್ನಾ ಟೈಮ್ ಆಯೇಗಾ- ಗಲ್ಲಿ ಬಾಯ್), ಉತ್ತಮ ಹಿನ್ನಲೆ ಗಾಯಕ - ಅರ್ಜೀತ್ ಸಿಂಗ್ (ಕಳಂಕ್ ನಹಿ ಲಕಂಕ್), ಉತ್ತಮ ಹಿನ್ನಲೆ ಗಾಯಕಿ - ಶಿಲ್ಪಾ ರಾವ್ (ಗುನ್ರೂ - ವಾರ್), ಉತ್ತಮ ಮೂಲ ಚಿತ್ರಕಥೆ - ಆರ್ಟಿಕಲ್ 15 (ಅಭಿನವ್ ಸಿನ್ಹಾ ಹಾಗೂ ಗೌರವ್ ಸೋಳಂಕಿ), ಉತ್ತಮ ಚಿತ್ರಕಥೆ ರೀಮಾ ಕಟ್ಲಿ ಹಾಗೂ ಝೋಯಾ ಅಖ್ತರ್ (ಗಲ್ಲಿ ಬಾಯ್), ಉತ್ತಮ ಸಂಭಾಷಣೆ - ವಿಜಯ್ ಮೌರ್ಯ (ಗಲ್ಲಿ ಬಾಯ್), ಉತ್ತಮ ಜೀವಮಾನದ ಸಾಧನೆ ಪ್ರಶಸ್ತಿ - ರಮೇಶ್ ಸಿಪ್ಪಿ, ಶ್ರೇಷ್ಠ ಸಿನಿಮಾತಾರೆ - ಗೋವಿಂದ, ಆರ್ಡಿ ಬರ್ಮನ್ ಪ್ರಶಸ್ತಿ - ಶಾಶ್ವತ್ ಸಚ್ದೇವ್ (ಉರಿ) ಗೆ ದೊರಕಿದೆ.