ಮಂಗಳೂರು, ಫೆ 14 (Daijiworld News/MB) : ಕ್ಯಾನೂಟ್ ಮಥಾಯಿಸ್ ಪಿಲಾರ್ ಅವರ ಗ್ಲೋರಿಯಸ್ ಏಂಜೆಲೋರ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ತುಳು ಚಿತ್ರ 'ಎನ್ನ' ಶುಕ್ರವಾರ ಬಿಡುಗಡೆಯಾಗಿ ತೆರೆಕಂಡಿದೆ.
ಈ ಸಂದರ್ಭದಲ್ಲಿ ಮಾತನಾಡಿದ ತುಳು ಸಿನಿಮಾ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್ ಬೈಲ್, "ತುಳು ಸಿನಿಮಾದ ಏಳಿಗೆ ಪ್ರಚಾರಕ್ಕಾಗಿ ದುಡಿದು, ಸಹಕಾರ ನೀಡಿದ ವಿಶ್ವನಾಥ್ ಕೋಡಿಕಲ್ ಅವರ ನಿರ್ದೇಶನದಲ್ಲಿ ಇಗ ಸಿನಿಮಾ ಮಾಡಿದ್ದಾರೆ. ಅವರಿಗೆ ಶುಭವಾಗಲಿ, ಈ ಸಿನಿಮಾಕ್ಕೆ ಜನರು ಪ್ರೋತ್ಸಾಹ ನೀಡಲಿ" ಎಂದು ಹೇಳಿದರು
ತುಳು ಸಿನಿಮಾ ನಿರ್ದೇಶಕ, ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ ಮಾತನಾಡಿ, ಈ ಸಿನಿಮಾದಲ್ಲಿ ಸುಮಾರು 173 ಕಲಾವಿದರು ಇದ್ದಾರೆ. ನಿರ್ದೇಶಕ ವಿಶ್ವನಾಥ್ ಅವರು ಹಲವು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿದ್ದಾರೆ. ಈ ಸಿನಿಮಾ ಯಶಸ್ವಿಯಾಗುತ್ತದೆ. ಹಾಗೆಯೇ ಹೆಚ್ಚು ಕಾಲ ಪ್ರದರ್ಶನ ಕಾಣುತ್ತದೆ ಎಂಬ ಭರವಸೆಯಿದೆ" ಎಂದರು
ಎನ್ನ ಸಿನಿಮಾ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ತೆರೆಕಂಡಿದೆ. ಈ ಸಿನಿಮಾದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ. 173 ಜನರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾಕ್ಕೆ ಯಾವುದೇ ಭಾಗ ಕಟ್ ಆಗದೆ ಯು ಎ ಸರ್ಟೀಫಿಕೇಟ್ ದೊರೆತಿದೆ.
ಇತ್ತೀಚೆಗೆ ಬಿಡುಗಡೆಯಾದ ಈ ಸಿನಿಮಾದ ಹಾಡಿಗೆ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಈ ಸಿನಿಮಾದ ಚಿತ್ರೀಕರಣವನ್ನು ವೈಶಾಲಿ ಎಸ್ ಉಡುಪಿ ಅವರು ಮಾಡಿದ್ದು ತುಳು ಸಿನಿಮಾದ ಚಿತ್ರೀಕರಣದ ಹೊಣೆ ಹೊತ್ತ ಮೊದಲ ಮಹಿಳೆ ಇವರಾಗಿದ್ದಾರೆ.
ನಿರ್ದೇಶಕ ವಿಶ್ವನಾಥ್ ಕೋಡಿಕಲ್ ಅವರೇ ಸಿನಿಮಾಕ್ಕೆ ಕಥೆ ಹಾಗೂ ಚಿತ್ರಕಥೆ ನೀಡಿದ್ದು ಪ್ರಶಾಂತ್ ಸಿಕೆ ಸಂಭಾಷಣೆ ಬರೆದಿದ್ದಾರೆ. ಸಹ ನಿರ್ದೇಶಕರಾಗಿ ಮ್ಯಾಕ್ಸಿಮ್ ಪಿರೇರ ಏಂಜಲೋರ್ ಕಾರ್ಯ ನಿರ್ವಹಿಸಿದ್ದಾರೆ. ಸಿನಿಮಾಕ್ಕೆ ಸಂಗೀತವನ್ನು ಲಾಲ್ ವೆಲೆಂಡಿನ್ ಸಲ್ಡಾನ್ಹ ಅವರು ನೀಡಿದ್ದು ವೈಶಾಲಿ ಎಸ್ ಉಡುಪಿಯವರ ಚಿತ್ರೀಕರಣ, ಅನುಷ್ ಚಂದ್ರ ಅವರ ಸಂಕಲನದಲ್ಲಿ ಸಿನಿಮಾ ಮೂಡಿ ಬಂದಿದೆ.
ಸಿನಿಮಾದ ಪ್ರಮುಖ ಪಾತ್ರದಲ್ಲಿ ವಿನೀತ್ ಕುಮಾರ್, ಶೃತಿ ಪೂಜಾರಿ, ಅಶ್ಮಿತ್ ರಾಜ್, ಪ್ರತೀಕ್ ಸನಿಲ್, ಪ್ರಶಾಂತ್ ಸಿ.ಕೆ, ಅತಿಥಿ ಪಾತ್ರದಲ್ಲಿ ಕೋಸ್ಟಲ್ವುಡ್ನ ಪ್ರಸಿದ್ದ ನಾಯಕ ಪೃಥ್ವಿ ಅಂಬರ್ ಅಭಿನಯಿಸಿದ್ದಾರೆ.