ವಾಷಿಂಗ್ಟನ್, ಫೆ 10 (Daijiworld News/MB) : ಜಾಗತಿಕ ಚಲನಚಿತ್ರರಂಗದ ಪ್ರತಿಷ್ಠಿತ 92ನೇ ಸಾಲಿನ ಆಸ್ಕರ್ ಪ್ರಶಸ್ತಿ ಸೋಮವಾರ ಪ್ರಕಟವಾಗಿದ್ದು ಜೋಕರ್ ಸಿನಿಮಾದ ನಟ ಜೋಕ್ವಿನ್ ಫೋನಿಕ್ಸ್ ಅತ್ಯುತ್ತಮ ನಟ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದು ರಿನೀ ಝೆಲ್ಲ್ವೆಗೆರ್ ಈ ಬಾರಿಯ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.
ಪಾರಾಸೈಟ್ ಸಿನಿಮಾದ ನಿರ್ದೇಶಕ ಬಾಂಗ್ ಜೂನ್ ಹೊ
ದಕ್ಷಿಣ ಕೊರಿಯಾದ ಪ್ಯಾರಾಸೈಟ್ ಸಿನಿಮಾ ಬೆಸ್ಟ್ ಮೋಷನ್ ಪಿಕ್ಚರ್ ಆಫ್ ದ ಇಯರ್ ಪ್ರಶಸ್ತಿಗೆ ಆಯ್ಕೆಯಾಗಿದ್ದು ಜೊತೆಗೆ ಈ ಸಿನಿಮಾದ ನಿರ್ದೇಶಕ ಬೊಂಗ್ ಜೂನ್ ಹೋ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ. ಇದೇ ಮೊದಲನೇ ಬಾರಿಗೆ ದಕ್ಷಿಣ ಕೊರಿಯಾದ ಸಿನಿಮಾವೊಂದು ಈ ಪ್ರಶಸ್ತಿಗೆ ಭಾಜನವಾಗಿರುವುದು.
ಹಾಗೆಯೇ ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು "ಒನ್ಸ್ ಅಪೋನ್ ಎ ಟೈಮ್ ಇನ್ ಹಾಲಿವುಡ್", ಈ ಐರಿಶ್ ಮ್ಯಾನ್ ಬಾಚಿದ್ದಾರೆ.
ಒನ್ಸ್ ಅಪೋನ್ ಎ ಟೈಮ್ ಚಿತ್ರದ ಅಭಿನಯಕ್ಕಾಗಿ ಬ್ರಾಡ್ ಪಿಟ್ ಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ದೊರಕಿದೆ.
ರೋಜರ್ ಡೀಕೆನ್ಸ್ ಅವರಿಗೆ 1917 ಚಿತ್ರದ ಛಾಯಾಗ್ರಹಣಕ್ಕಾಗಿ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮ್ಯಾರೇಜ್ ಸ್ಟೋರಿ ನಟಿ ಲೌರಾ ಡೆರ್ನ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದಿದ್ದಾರೆ.
‘ಒನ್ಸ್ ಅಪಾನ್ ಎ ಟೈಮ್... ಇನ್ ಹಾಲಿವುಡ್’ ಚಿತ್ರದಲ್ಲಿನ ನಟನೆಗಾಗಿ ಬ್ರಾಡ್ ಪಿಟ್ಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ದೊರೆತಿದೆ. ‘ಮ್ಯಾರೇಜ್ ಸ್ಟೋರಿ’ ಚಿತ್ರದಲ್ಲಿನ ನಟೆನಾಗಿ ಲೌರಾ ಡರ್ನ್ ಅವರು ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಅತ್ಯುತ್ತಮ ನಿರ್ದೇಶಕ: ಬಾಂಗ್ ಜೂನ್ ಹೊ , ಪಾರಾಸೈಟ್ ಸಿನಿಮಾ, ಅತ್ಯುತ್ತಮ ನಟ: ಜೊವಾಕ್ವಿನ್ ಫೀನಿಕ್ಸ್ – ಜೋಕರ್ ಸಿನಿಮಾ, ಅತ್ಯುತ್ತಮ ನಟಿ: ಸಿಂಥಿಯಾ ಎರಿವೊ – ಹ್ಯಾರಿಯೆಟ್ ಸಿನಿಮಾ, ಅತ್ಯುತ್ತಮ ಪೋಷಕ ನಟ: ಬ್ರಾಡ್ ಪಿಟ್ - ಒನ್ಸ್ ಅಪಾನ್ ಎ ಟೈಮ್... ಇನ್ ಹಾಲಿವುಡ್ ಸಿನಿಮಾ, ಅತ್ಯುತ್ತಮ ಪೋಷಕ ನಟಿ: ಲೌರಾ ಡರ್ನ್ ಮ್ಯಾರೇಜ್ ಸ್ಟೋರಿ ಸಿನಿಮಾ,
ಮ್ಯೂಸಿಕ್ (ಒರಿಜಿನಲ್ ಸಾಂಗ್) – ‘ಲವ್ ಮಿ ಅಗೈನ್’ ಫ್ರಂ ರಾಕೆಟ್ ಮ್ಯಾನ್, ಮ್ಯೂಸಿಕ್ (ಒರಿಜಿನಲ್ ಸ್ಕೋರ್) – ಜೋಕರ್, ಅತ್ಯುತ್ತಮ ಚಿತ್ರಕಥೆ –ಪಾರಾಸೈಟ್, ಮೇಕಪ್ ಹೇರ್ ಸ್ಟೈಲ್ – ಬಾಂಬ್ಶೆಲ್ ,ವಿಶುವಲ್ ಎಫೆಕ್ಟ್ಸ್ – 1917, ಅತ್ಯುತ್ತಮ ಸಂಕಲನ – ಫೋರ್ಡ್ ವಿ ಫೆರಾರಿ, ಸೌಂಡ್ ಮಿಕ್ಸಿಂಗ್ – 1917 , ಅತ್ಯುತ್ತಮ ಧ್ವನಿ ಸಂಕಲನ – ಫೋರ್ಡ್ ವಿ ಫೆರಾರಿ, ಆ್ಯನಿಮೇಟೆಡ್ ಕಿರುಚಿತ್ರ – ಹೇರ್ ಲವ್, ಆ್ಯನಿಮೇಟೆಡ್ ಫೀಚರ್ ಫಿಲಂ – ಟಾಯ್ ಸ್ಟೋರಿ 4 ಸಿನಿಮಾಕ್ಕೆ ದೊರೆತಿದೆ.