ಮಂಗಳೂರು, ಫೆ 04 (Daijiworld News/MB) : ಕವೀಶ್ ಶೆಟ್ಟಿ ನಿರ್ಮಾಣ ಮಾಡಿರುವ ಜಿಲ್ಕ ಕನ್ನಡ ಸಿನಿಮಾ ಫೆ.7 ರಂದು ರಾಜ್ಯಾದ್ಯಂತ ತೆರೆಕಾಣಲಿದೆ.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಿನಿಮಾ ನಟಿ ಪ್ರಿಯಾ ಹೆಗ್ಡೆ ಅವರು, "ಜಿಲ್ಕ ಸಿನಿಮಾ ಏಕಕಾಲದಲ್ಲಿ ಕನ್ನಡ, ಹಿಂದಿ ಹಾಗೂ ಮರಾಠಿ ಭಾಷೆಯಲ್ಲಿ ನಿರ್ಮಾಣಗೊಂಡಿದ್ದು ಫೆ. ೭ರಂದು ಕನ್ನಡ ಸಿನಿಮಾ ತೆರೆಕಾಣಲಿದೆ" ಎಂದು ತಿಳಿಸಿದ್ದಾರೆ.
"ಜಿಲ್ಕ ಎಂದರೆ ಪೀಳಿಗೆ ಎಂದು ಅರ್ಥ. ಇಂದಿನ ಯುವ ಪೀಳಿಗೆಯ ಮನಸ್ಸಿನ ಒಳಹೊರ ನೋಟಗಳ ಪ್ರೇಮ ಕತೆ ಹಾಗೂ ಎರಡು ಪೀಳಿಗೆಗಳ ಅಂತರದಿಂದ ಹುಟ್ಟುವ ಭಿನ್ನ ತಿರುವುಗಳ ವ್ಯತ್ಯಾಸಗಳನ್ನು ಸಿನಿಮಾದಲ್ಲಿ ಕಾಣಬಹುದಾಗಿದೆ" ಎಂದು ಹೇಳಿದ್ದಾರೆ.
ಈ ಸಿನಿಮಾದಲ್ಲಿ ಹೆಚ್ಚಾಗಿ ಕರವಾಳಿಯವರು ನಟಿಸಿದ್ದು ನಾಯಕ ನಟನಾಗಿ ಕವೀಶ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಲಕ್ಷ ಶೆಟ್ಟಿ, ಗೋಪಿಕಾ ದಿನೇಶ್, ಕೃಷ್ಣ ಮೂರ್ತಿ, ಪ್ರತೀಕ್ ಶೆಟ್ಟಿ, ಪೂರ್ಣಿಮಾ ಪಾತ್ರಗಳಿಗೆ ಜೀವ ತುಂಬಿದ್ದಾರೆ.
ಕವೀಶ್ ಶೆಟ್ಟಿಯವರೇ ಸಿನಿಮಾಕ್ಕೆ ಚಿತ್ರಕತೆ, ಕತೆ, ನಿರ್ದೇಶನ ಹಾಗೂ ಸಾಹಿತ್ಯ ನೀಡಿದ್ದು ಉದಯ ಶೆಟ್ಟಿ, ಕಿಶೋರ್ ಖುಬ್ ಚಂದಾನಿ, ತೇಹಾ ಸಿಂಗ್ ಸೈನಿ, ಮನೀಶ್ ನಾಗ್ ದೇವ್ ನಿರ್ಮಾಪಕರಾಗಿದ್ದಾರೆ.
ಛಾಯಾಗ್ರಹಣವನ್ನು ವಿಶ್ವಜಿತ್ ರಾವ್ ಹಾಗೂ ಅಜೀಯ ಪಾಲ್ ಸಿಂಗ್ ಅವರು ಮಾಡಿದ್ದು ಸಂಗೀತವನ್ನು ಪ್ರಾಂಶು ಜಾ ಅವರು ನೀಡಿದ್ದಾರೆ. ಗಿರಿ ಮಹೇಶ್ ಅವರು ಸಂಕಲನ ಮಾಡಿದ್ದಾರೆ.
ಈ ಸಿನಿಮಾದ ಚಿತ್ರೀಕರಣವನ್ನು ಉಡುಪಿ, ಮಂಗಳೂರು, ಮಣಿಪಾಲ, ಕುಂದಾಪುರ, ಕಾರವಾರ, ಮುಂಬೈ, ಗೋವಾದಲ್ಲಿ ಮಾಡಲಾಗಿದೆ.