ಮುಂಬೈ, ಜ 27 (Daijiworld News/MB) : ಅಮೆರಿಕದ ಬಾಸ್ಕೆಟ್ ಬಾಲ್ ದಂತಕಥೆ ಆಟಗಾರ ಕೋಬೆ ಬ್ರಯಾಂಟ್ ಅವರ ನಿಧನಕ್ಕೆ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅವರು ಗ್ರಾಮಿ ಅವಾರ್ಡ್ ಸಮಾರಂಭದಲ್ಲಿ ಸಂತಾಪ ಸೂಚಿಸಿದ್ದಾರೆ.
ಅವರು ತನ್ನ ಉಗುರಿನಲ್ಲಿ ನೇಲ್ ಆರ್ಟ್ ಮೂಲಕ ಕೋಬೆ ಅವರ ಜೆರ್ಸಿ ಸಂಖ್ಯೆ 24ನ್ನು ಬರೆದಿದ್ದು ಈ ಫೋಟೋವನ್ನು ತನ್ನ ಇನ್ಸ್ಟಾಗ್ರಾಂನಲ್ಲಿ ಸ್ಟೋರಿಯಲ್ಲಿ ಅಪ್ಡೇಟ್ ಮಾಡಿದ್ದಾರೆ.
ಈ ಫೋಟೋದೊಂದಿಗೆ ಆರ್.ಐ.ಪಿ. (ರೆಸ್ಟ್ ಇನ್ ಪೀಸ್) ಮಾಮ್ಬ ಎಂದು ಬರೆದುಕೊಂಡಿದ್ದಾರೆ.
ಹಾಗೆಯೇ ತನ್ನ ಇನ್ನೊಂದು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಅವರ ಮನೆಯಲ್ಲಿ ಅವರ ಉಪಸ್ಥಿತಿಯನ್ನು ಅನುಭವಿಸುತ್ತಿದ್ದಾರೆ ಎಂದು ಬರೆದಿದ್ದಾರೆ.
ಆದರೆ ಗ್ರಾಮಿ ಅವಾರ್ಡ್ ಸಮಾರಂಭದಲ್ಲಿ ಪ್ರಿಯಾಂಕ ಧರಿಸಿದ ಉಡುಗೆಗೆ ಮಾತ್ರ ಹಲವರು ಕಾಮೆಂಟ್ ಮಾಡಿದ್ದಾರೆ. ನೀವು ತುಂಬಾ ಚೆನ್ನಾಗಿ ಕಾಣುತ್ತಿದ್ದೀರಿ. ಆದರೆ ನಮ್ಮ ಡ್ರೆಸ್ ಚೆನ್ನಾಗಿಲ್ಲ. ಇಂತಹ ಬಟ್ಟೆ ಹಾಕುವುದಕ್ಕೆ ನಿಮಗೆ ನಾಚಿಕೆ ಆಗಲ್ವ ಎಂದೆಲ್ಲಾ ಉತ್ತರಿಸಿದ್ದಾರೆ.