ಮುಂಬೈ, ಜ 25 (Dajiworld News/MB) : ಮುಂಬೈ ನಗರದಲ್ಲಿನ ಮೀರಾ ರಸ್ತೆ ರೆಸಿಡೆನ್ಸಿಯಲ್ಲಿ ಬಾಲಿವುಡ್ ಕಿರುತೆರೆ ನಟಿ ಸೆಜಲ್ ಶರ್ಮಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
'ದಿಲ್ ತೋ ಹ್ಯಾಪಿ ಹೈ ಜಿ' ಧಾರಾವಾಹಿಯಲ್ಲಿ 'ಸಿಮ್ಮಿ ಖೋಸ್ಲಾ' ಪಾತ್ರದ ಮೂಲಕ ಹೆಸರುವಾಸಿಯಾಗಿರುವ ನಟಿ ಸೆಜಲ್ ಶರ್ಮಾ ತಮ್ಮ ಮೀರಾ ರಸ್ತೆ ರೆಸಿಡೆನ್ಸಿಯಲ್ಲಿ ನೇಣಿಗೆ ಶರಣಾಗಿದ್ದಾರೆ.
ಶುಕ್ರವಾರ ಮುಂಜಾನೆ ನಟಿ ಶರ್ಮಾನ ರೂಮ್ಮೇಟ್ ನಟಿಗೆ ಫೋನ್ ಮಾಡಿದ್ದು ಆದರೆ ಶರ್ಮಾ ಫೋನ್ ರಿಸೀವ್ ಮಾಡಿರಲಿಲ್ಲ. ಹೀಗಾಗಿ ರೂಮ್ಮೇಟ್ ಬಾಗಿಲು ತೆರದು ನೋಡೊದಾಗ ಶರ್ಮಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಆ ಕೂಡಲೇ ಶರ್ಮಾ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದು ಆದರೆ ಅವರು ಅಷ್ಟರಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ರೂಮ್ನಲ್ಲಿ ಡೆತ್ನೋಟ್ ಪತ್ತೆಯಾಗಿದ್ದು ವೈಯಕ್ತಿಕ ಕಾರಣಗಳಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬರೆದಿದ್ದಾರೆ. ಈ ಕುರಿತು ಆಕೆಯ ಸಹ ನಟ ಆಕೆಯ ತಂದೆಯ ಆರೋಗ್ಯದ ಕಾರಣದಿಂದಾಗಿ ಆಕೆ ಮಾನಸಿಕವಾಗಿ ಕುದ್ದಿದಳು ಎಂದು ಹೇಳಿದ್ದಾನೆ. ಆದರೆ ಆಕೆಯ ಆತ್ಮಹತ್ಯೆಗೆ ಪ್ರೇಮ ವೈಫಲ್ಯ ಕಾರಣ ಎಂದು ಹೇಳಲಾಗುತ್ತಿದೆ.
ಉದಯಪುರ ಮೂಲದವರಾಗಿರುವ ನಟಿ ಸೆಜಲ್ ಶರ್ಮಾ 2017 ರಲ್ಲಿ ಮುಂಬೈಗೆ ಬಂದು ನಟನಾ ವೃತ್ತಿ ಆರಂಭಿಸಿದ್ದಾರೆ. 'ದಿಲ್ ತೋಹ್ ಹ್ಯಾಪಿ ಹೈ ಜಿ' ಧಾರಾವಾಹಿ ಮೂಲಕ ನಟನಾ ವೃತ್ತಿಗೆ ಪಾದಾರ್ಪಣೆ ಮಾಡಿರುವ ಅವರು ಕೆಲವು ಜಾಹೀರಾತುಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲದೇ ವೆಬ್ ಸೀರಿಸ್ನಲ್ಲೂ ಅಭಿನಯಿಸಿದ್ದಾರೆ.
ನಾನು 10 ದಿನಗಳ ಹಿಂದೆ ಅವಳನ್ನು ಭೇಟಿ ಮಾಡಿದ್ದೆ. ಭಾನುವಾರ ಅವಳು ವಾಟ್ಸ್ಆಪ್ ಮೂಲಕ ಚಾಟ್ ಮಾಡಿದ್ದೆವು. ನನಗೆ ಈ ಸುದ್ದಿ ಕೇಳಿ ಆಶ್ಚರ್ಯವಾಗುತ್ತಿದೆ. 10 ದಿನಗಳ ನಾನು ಅವರನ್ನು ಭೇಟಿ ಮಾಡಿದಾಗ ಅವರು ಚೆನ್ನಾಗಿ ಇದ್ದರು. ಆದರೆ ಈಗ ಇದ್ದಕ್ಕಿದಂತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಶರ್ಮಾ ಅವರ ಸಹನಟ ಹೇಳಿದ್ದಾರೆ.