ಮಂಗಳೂರು, ಜ 19 (Daijiworld News/MB) : '2 ಎಕ್ರೆ' ತುಳು ಸಿನೆಮಾದ ಫ್ಲೆಕ್ಸ್ ಅನ್ನು ರಾತ್ರೋರಾತ್ರಿ ದುಷ್ಕರ್ಮಿಗಳು ಕದ್ದೊಯ್ದಿದ್ದಾರೆ.
ಜಾಹಿರಾತಿಗೆಂದು ಹಾಕಿರುವ ಈ ಫ್ಲೆಕ್ಸ್ಗಳನ್ನು ರಾತ್ರಿ ಹೊತ್ತಲ್ಲಿ ಬಂದ ಖದೀಮರ ಗುಂಪೊಂದು ಕಳವು ಮಾಡಿ ಅದನ್ನು ಟೆಂಪೋದಲ್ಲಿ ಸಾಗಿಸಿದ್ದು ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಈ ಘಟನೆ ಶುಕ್ರವಾರ ರಾತ್ರಿ ನಡೆದಿದ್ದು ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಶನಿವಾರ ರಾತ್ರಿಯಲ್ಲೂ ಕೂಡಾ ಸಿನೆಮಾದ ಫ್ಲೇಕ್ಸ್ಗಳನ್ನು ಕದ್ದೊಯ್ಯಲಾಗಿದೆ ಎಂದು ಹೇಳಲಾಗಿದೆ.
ಪೃಥ್ವಿ ಅಂಬರ್ ನಟನೆಯ ವಿಸ್ಮಯ ವಿನಾಯಕ್ ನಿರ್ದೇಶನದ ಈ ಸಿನೆಮಾವು ಜನವರಿ 10ರಂದು ಬಿಡುಗಡೆಯಾಗಿದೆ.