ಮುಂಬೈ, ಜ 18 (Daijiworld/MB) : ಕಾಂಟ್ರವರ್ಸಿ ಮೂಲಕವೇ ಹೆಚ್ಚಾಗಿ ಸುದ್ದಿಯಾಗುವ ರಾಖಿ ಸಾವಂತ್ ಈಗ ಕಣ್ಣೀರು ಹಾಕಿ ಸುದ್ದಿಯಾಗಿದ್ದಾರೆ.
ಸಂದರ್ಶನವೊಂದರಲ್ಲಿ ತಾವು ಕಣ್ಣೀರು ಹಾಕಿರುವ ವಿಡಿಯೋವನ್ನು ರಾಖಿ ಸಾವಂತ್ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು ಉತ್ತಮ ಜೀವನ ನೀಡಿದಕ್ಕಾಗಿ ಜೀಸಸ್ ಕ್ರೈಸ್ತನಿಗೆ ಧನ್ಯವಾದಗಳು ಎಂದು ಬರೆದಿದ್ದಾರೆ.
ನಿರೂಪಕ ರಾಜೀವ್ ಆರಂಭದಲ್ಲಿ ಈ ಶೋ ಬಳಿಕ ಯಾವುದೇ ಕಾಂಟ್ರವರ್ಸಿ ಸುದ್ದಿಗಳು ಇರಲ್ಲ. ಈ ಹಿನ್ನಲೆಯಲ್ಲಿ ನಾವು ರಾಖಿ ಸಾವಂತ್ ಅವರ ಬಳಿ ಮಾತನಾಡಲ್ಲ ಬದಲಾಗಿ ನಿಮಗೆ ಗೊತ್ತಿರದ ನಿರು ಬೇಡಾರನ್ನು ನಾವು ಪರಿಚಯ ಮಾಡುತ್ತೇವೆ ಎಂದು ಹೇಳಿದ್ದು, ಆ ಕೂಡಲೇ ರಾಖಿ ಅವರು ಅದು ನನ್ನ ಬಾಲ್ಯದ ಹೆಸರು ಎಂದು ಹೇಳಿದ್ದಾರೆ.
ರಾಖಿ ಸಾವಂತ್ ಬಾಲ್ಯದ ಬಗ್ಗೆ ಹೇಳುತ್ತಾ ಭಾವುಕಾಗಿದ್ದು, ನಮಗೆ ಬಾಲ್ಯದಲ್ಲಿ ಒಂದು ಹೊತ್ತಿನ ಊಟವೂ ಸಿಗುತ್ತಿರಲಿಲ್ಲ. ಇಟ್ಟಿಗೆಗಳಿಂದ ಮಾಡಿದ ಒಲೆಯ ಮೇಲೆ ನನ್ನ ತಾಯಿ ಅಡುಗೆ ಮಾಡುತ್ತಿದ್ದರು. ನೆರೆಹೊರೆಯವರು ಬೇಡ ಎಂದು ಬಿಟ್ಟ ಆಹಾರ ನಾವು ತಿನ್ನುತ್ತಿದ್ದೇವೆ ಎಂದು ಅಮ್ಮ ಹೇಳುತ್ತಿದ್ದರು. ಅಷ್ಟು ಕಷ್ಟದಲ್ಲಿ ನಾನು ನನ್ನ ಬಾಲ್ಯವನ್ನು ಕಳೆದಿದ್ದೇನೆ ಎಂದು ಹೇಳಿದ್ದಾರೆ.
ನನ್ನ ತಾಯಿ ಆಸ್ಪತ್ರೆಯಲ್ಲಿ ಆಯಾ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಅಲ್ಲಿ ರೋಗಿಗಳ ಶೌಚ ಸ್ವಚ್ಛ ಮಾಡುವ ಕೆಲಸ ಅವರದ್ದಾಗಿತ್ತು. ಅವರು ದುಡಿದ ಹಣವೇ ನಮ್ಮಗೆ ಆಧಾರವಾಗಿತ್ತು ಎಂದು ಹೇಳಿ ಕಣ್ಣೀರಿಟ್ಟಿದ್ದಾರೆ.