ಮಂಗಳೂರು, ಜ.12 (Daijiworld News/MB) : ಕೊಸ್ಡಲ್ ವುಡ್ನ ಎರಡು ಸಿನೆಮಾ ತಂಡಗಳು ಒಂದೇ ದಿನ ಸಿನೆಮಾವನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದು ಮತ್ತೆ ಇತಿಹಾಸ ಮರುಕಳಿಸುತ್ತಾ ಎನ್ನುವ ಅನುಮಾನ ಮೂಡಿದೆ.
ಕೆ. ಸೂರಜ್ ಶೆಟ್ಟಿ ನಿರ್ದೇಶನದ ಸಿನೆಮಾ "ಇಂಗ್ಲೀಷ್" ಹಾಗೂ ಸೂರಜ್ ಬೋಳಾರ್ ನಿರ್ದೇಶನದ ಸಿನೆಮಾ "ರಾಹುಕಾಲ ಗುಳಿಗಕಾಲ" ಎಪ್ರಿಲ್ 3 ರಂದು ತೆರೆಕಾಣಲಿದೆ.
ಈ ಹಿಂದೆ ಮಯೂರ್ ಆರ್ ಶೆಟ್ಟಿ ನಿರ್ದೇಶನದ 'ಮೈ ನೇಮ್ ಇಸ್ ಅಣ್ಣಪ್ಪ' ಹಾಗೂ ದೇವದಾಸ್ ಕಾಪಿಕಾಡ್ ನಿರ್ದೇಶನದ 'ಏರಾ ಉಲ್ಲೆರ್ಗೆ' ಸಿನೆಮಾ ಒಂದೇ ದಿನ ತೆರೆಕಂಡಿದ್ದು ಎರಡು ಸಿನೆಮಾ ಕೂಡಾ ಸೋತಿತ್ತು. ಈ ಸಿನೆಮಾದ ರೀಲಿಸ್ ದಿನವನ್ನು ಬದಲು ಮಾಡಲು ಎರಡು ಸಿನೆಮಾ ತಂಡದ ನಿರ್ಮಾಪಕರು ಒಪ್ಪಿರಲಿಲ್ಲ. ಈಗ ಮತ್ತೆ ಒಂದೇ ದಿನ ಎರಡು ಸಿನೆಮಾಗಳು ತೆರೆಕಾಣಲು ಮುಂದಾಗಿದ್ದು ಇತಿಹಾಸ ಮರುಕಳಿಸುತ್ತಾ ಎಂಬ ಅನುಮಾನ ಮೂಡಿದೆ.
ಹಾಗೆಯೇ 'ಎರಾ ಉಲ್ಲೆರ್ಗೆ' ಹಾಗೂ 'ಮೈ ನೇಮ್ ಇಸ್ ಅಣ್ಣಪ್ಪ' ಸಿನೆಮಾಕ್ಕಿಂತ ಮೊದಲು ಅದೇ ವರ್ಷದಲ್ಲಿ ಕಿಶೋರ್ ಮೂಡುಬಿದ್ರೆ ನಿರ್ದೇಶನದ 'ಅಪ್ಪೆ ಟೀಚರ್' ಹಾಗೂ ಪ್ರಜ್ವಲ್ ಕುಮಾರ್ ಅತ್ತಾವರ್ ಅವರ 'ತೊಟ್ಟಿಲ್' ಸಿನೆಮಾ ಒಂದೇ ದಿನ ತೆರೆಕಂಡಿತ್ತು. ಆದರೆ 'ತೊಟ್ಟಿಲ್' ಸಿನೆಮಾ ಸೋಲು ಕಂಡಿದ್ದು 'ಅಪ್ಪೆ ಟೀಚರ್' ಸಿನೆಮಾಕ್ಕೆ ಪ್ರೇಕ್ಷಕರು ಗೆಲುವು ನೀಡಿ ಸಿನೆಮಾ ನೂರು ದಿನ ತೆರೆಕಂಡಿತ್ತು.
ಈ ಹಿಂದೆ ನಡೆದ ಎಲ್ಲಾ ಬೆಳವಣೆಗೆಗಳನ್ನು ಗಮನಿಸಿದರೆ ಎರಡು ಸಿನೆಮಾಗಳು ಒಂದೇ ದಿನ ಬಿಡುಗಡೆಯಾಗುವುದು ಎರಡು ಸಿನೆಮಾ ತಂಡಗಳಿಗೂ ಒಳ್ಳೆಯದಲ್ಲ. ಪ್ರೇಕ್ಷಕರು ಯಾವುದಾದರೂ ಒಂದು ಸಿನೆಮಾ ನೋಡುತ್ತಾರೆ. ಇಲ್ಲದಿದ್ದರೆ ಎರಡು ಸಿನೆಮಾ ನೋಡುತ್ತಾರೆ. ಪ್ರೇಕ್ಷಕರು ಎರಡು ಸಿನೆಮಾವನ್ನು ಗೆಲ್ಲಿಸಬಹುದು ಅಥವಾ ಸೋಲಿಸಬಹುದು. ಇಲ್ಲದಿದ್ದರೆ ಯಾವುದಾದರು ಒಂದು ಸಿನೆಮಾವನ್ನು ಗೆಲ್ಲಿಸಬಹುದು.
ಹೊಸ ಹೊಸ ಸಿನೆಮಾಗಳ ಮೂಲಕ ಜನರನ್ನು ರಂಜಿಸುತ್ತಿರುವ ಕೋಸ್ಟಲ್ವುಡ್ನಲ್ಲಿ ಇಂತಹ ಬೆಳವಣಿಗೆ ಸಿನೆಮಾದ ಸೋಲಿಗೆ ಕಾರಣವಾಗಬಹುದು. ಆ ನಿಟ್ಟಿನಲ್ಲಿ ಎರಡು ಸಿನೆಮಾ ತಂಡಗಳು ಮಾತಾನಾಡಿಕೊಂಡು ಈ ಸಮಸ್ಯೆಯನ್ನು ಪರಿಹರಿಸುವುದು ಒಳಿತು.