ನವದೆಹಲಿ, ಜ 9 (Daijiworld News/MB) : ಬಾಲಿವುಡ್ ನಟಿ ದಿಪೀಕಾ ಪಡುಕೋಣೆ ನಟಿಸಿರುವ ಆ್ಯಸಿಡ್ ದಾಳಿಗೊಳಗಾದ ಸಂತ್ರಸ್ತೆ ಲಕ್ಷ್ಮಿ ಅಗರ್ವಾಲ್ ಜೀವನಾಧಾರಿತ ಛಪಾಕ್ ಸಿನೆಮಾದಲ್ಲಿ ತನ್ನ ಹೆಸರು ನೀಡಿಲ್ಲ ಎಂದು ಕೋರ್ಟ್ ಮೆಟ್ಟಿಲೇರಿದ್ದ ಅಪರ್ಣಾ ಭಟ್ ಅವರ ಪರವಾಗಿ ಕೋರ್ಟ್ ತೀರ್ಪು ನೀಡಿದೆ.
ಸಿನೆಮಾದಲ್ಲಿ ನನಗೆ ಯಾವ ಕ್ರೆಡಿಟ್ಅನ್ನು ನೀಡಿಲ್ಲ ಎಂದು ಆ್ಯಸಿಡ್ ದಾಳಿ ಸಂತ್ರಸ್ತೆ ಲಕ್ಷ್ಮೀ ಅಗರ್ವಾಲ್ ಪರ ವಕೀಲೆ ಅಪರ್ಣಾ ಭಟ್ ಫೇಸ್ಬುಕ್ನಲ್ಲಿ ಬಡೆದುಕೊಂಡಿದ್ದರು. ಹಾಗೆಯೇ ಕೋರ್ಟ್ ಮೆಟ್ಟಿಲೇರಿದ್ದರು. ವಕೀಲೆಯ ಅರ್ಜಿ ವಿಚಾರಣೆ ಮಾಡಿದ ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್ ಅಪರ್ಣಾ ಭಟ್ ಅವರ ಹೆಸರನ್ನು ಸಿನೆಮಾದಲ್ಲಿ ನಮೂದಿಸಬೇಕು ಎಂದು ಸಿನಿಮಾ ನಿರ್ಮಾಪಕಿ ಮೇಘನಾ ಗುಲ್ಝಾರ್ ಗೆ ಆದೇಶ ನೀಡಿದೆ ಎಂದು ವರದಿ ತಿಳಿಸಿದೆ.
ವಕೀಲೆ ಅಪರ್ಣಾ ಭಟ್ ಈ ಸಿನೆಮಾದ ಪ್ರೀಮಿಯರ್ ಶೋ ನೋಡಿದ್ದು, ಆ್ಯಸಿಡ್ ದಾಳಿ ಸಂತ್ರಸ್ತೆ ಲಕ್ಷ್ಮೀ ಅಗರ್ವಾಲ್ ಪರವಾಗಿ ಕಾನೂನು ಹೋರಾಟ ನಡೆಸಿದ್ದು ಆ ಶ್ರಮವನ್ನು ಸಿನೆಮಾ ತಂಡ ಗುರುತು ಮಾಡಿಲ್ಲ. ನನಗೆ ಯಾವ ಹಣವೂ ಬೇಕಾಗಿಲ್ಲ ಆದರೆ ಕ್ರೆಡಿಟ್ ಬೇಕು ಎಂದು ಅಪರ್ಣಾ ಭಟ್ ಫೇಸ್ ಬುಕ್ ಪೋಸ್ಟ್ ಮಾಡಿದ್ದರು.