ಮಂಗಳೂರು, ಜ 9 (Daijiworld News/MB) : ಬಾಕೂರು ಸತೀಶ್ ಪೂಜಾರಿ ನಿರ್ಮಾಣ ಮಾಡಿರುವ ತುಳು ಸಿನೆಮಾ 'ಗಬ್ಬರ್ ಸಿಂಗ್'ನ ಎರಡನೇ ಹಂತದ ಚಿತ್ರೀಕರಣ ಇಂದಿನಿಂದ ಸುರತ್ಕಲ್ ಪ್ರದೇಶದಲ್ಲಿ ನಡೆಯಲಿದೆ.
ಮುತ್ತು ಗೋಪಾಲ ಫಿಲಂಸ್ರವರ ಕಡಂದಲೆ ಸುರೇಶ್ ಭಂಡಾರಿ ಅರ್ಪಿಸುವ ಈ ಸಿನೆಮಾದಲ್ಲಿ ಅಂಬರ್ ಕ್ಯಾಟರರ್ಸ್ ಎಂಬ ತುಳು ಸಿನಿಮಾದ ಮೂಲಕ ಕೋಸ್ಟಲ್ವುಡ್ಗೆ ಎಂಟ್ರಿ ಪಡೆದಿದ್ದ ಉದ್ಯಮಿ ಕಡಂದಲೆ ಸುರೇಶ್ ಅವರ ಪುತ್ರ ಸೌರಭ್ ಭಂಡಾರಿ ನಾಯಕನಾಗಿ ಪೊಲೀಸ್ ಅಧಿಕಾರಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಸಿನಿಮಾದ ನಿರ್ದೇಶನ, ಚಿತ್ರಕತೆ, ಹಾಗೂ ಕತೆ ಪ್ರದೀಪ್ ಬೈಕಾಡಿ ಅವರದ್ದಾಗಿದ್ದು ಸಹ ನಿರ್ದೇಶಕರಾಗಿ ರೀಶನ್ ಮೈಸೂರು ಜೊತೆಗೂಡಿದ್ದಾರೆ. ಹಾಗೆಯೇ ಮಧು ಸುರತ್ಕಲ್ ಸಂಭಾಷಣೆ ಬರೆದಿದ್ದಾರೆ.
ನವ್ಯ ಪೂಜಾರಿ ನಾಯಕಿಯಾಗಿ ಕಾಣಿಸಿಕೊಂಡಿದ್ದು ನವೀನ್ ಡಿ ಪಡೀಲ್, ಭೋಜರಾಜ್ ವಾಮಂಜೂರು, ಅರವಿಂದ ಬೋಳಾರ್, ಪ್ರಸನ್ನ ಶೆಟ್ಟಿ ಬೈಲೂರು, ಪ್ರಜ್ವಲ್, ಉಮೇಶ್ ಮಿಜಾರ್, ಗಿರೀಶ್ ಎಂ ಶೆಟ್ಟಿ ಕಟೀಲ್, ಸತೀಶ್ ಬಂದಲೆ, ಶಶಿ ಬೆಳ್ಳಾಯಾರು, ನರೇಶ್ ಕುಮಾರ್ ಸಸಿಹಿತ್ಲು, ಸುನಿಲ್ ಕೃಷ್ಣಾಪುರ, ಯಶವಂತ ಶೆಟ್ಟಿ ಕೃಷ್ಣಾಪುರ, ಸಂದೀಪ್ ಭಕ್ತ, ಉದಯ ಆಳ್ವ ಸುರತ್ಕಲ್, ಪ್ರಕಾಶ್, ಚಂದ್ರಹಾಸ ಶೆಟ್ಟಿ ಮಾಣಿ, ಶಿಲ್ಪಾ ಶೆಟ್ಟಿ, ಮೋಹನ್ ಕೊಪ್ಪಳ, ಶೇಖರ್ ಭಂಡಾರಿ ಕಾರ್ಕಳ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಸಿನಿಮಾಕ್ಕೆ ಸಂಗೀತವನ್ನು ಡೋಲ್ಫಿನ್ ನೀಡಲಿದ್ದು ನರೇಶ್ ಕುಮಾರ್ ಸಸಿಹಿತ್ಲು, ಆರ್ ಎನ್ ಶೆಟ್ಟಿ ಕಳವಾರು ಸಾಹಿತ್ಯ ಬರೆದಿದ್ದಾರೆ. ಛಾಯಾಗ್ರಹಣವನ್ನು ರವಿ ಸುವರ್ಣ, ಸಂಕಲನವನ್ನು ಹರೀಶ್ ಕೊಟ್ಟಾಡಿ ಮಾಡಲಿದ್ದಾರೆ.